ಪ್ಯಾರಾಚೂಟ್‌ ಮೂಲಕ ಹೋಂ ಡೆಲಿವರಿ

ಶುಕ್ರವಾರ, 17 ಫೆಬ್ರವರಿ 2017 (13:31 IST)
ಸರಕುಗಳನ್ನು ಹೋಂ ಡೆಲಿವರಿ ಮಾಡಲು ಇ-ಕಾಮರ್ಸ್ ದಿಗ್ಗಜ ಅಮೆಜಾನ್ನ್ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಈಗಾಗಲೆ ಡ್ರೋನ್‌ಗಳ ಮೂಲಕ ಡೆಲಿವರಿ ಸೇವೆಗಳನ್ನು ಪ್ರಾರಂಭಿಸಿದ ಕಂಪೆನಿ ಇನ್ನು ಮುಂದೆ ಆಕಾಶಮಾರ್ಗವಾಗಿ ಗ್ರಾಹಕರ ಮನೆ ಬಾಗಿಲಿಗೆ ಸರಕನ್ನು ರವಾನಿಸಲು ಪ್ಯಾರಾಚೂಟ್ ಬಳಸಿಕೊಳ್ಳಲಿದೆ.
 
ಸದ್ಯಕ್ಕೆ ಅಮೆಜಾನ್ ಪ್ರಾರಂಭಿಸಿರುವ ಡ್ರೋನ್ ಡೆಲಿವರಿ ವಿಧಾನದಲ್ಲಿ ಗ್ರಾಹಕರ ಮನೆ ಬಳಿ ಡ್ರೋನ್ ಲ್ಯಾಂಡ್ ಆಗಬೇಕಾಗುತ್ತದೆ. ಆದರೆ ಡ್ರೋನ್‌ಗಳು ಗಗನದಲ್ಲಿ ಪ್ರಯಾಣಿಸುವುದಕ್ಕಿಂತ ಲ್ಯಾಂಡಿಂಗ್...ಟೇಕಾಫ್‍ಗಳಿಗೆ ಹೆಚ್ಚಿನ ಖರ್ಚಾಗುತ್ತಿದೆಯಂತೆ. ಇದರ ಜತೆಗೆ ಕೆಲವು ಭದ್ರತಾ ಸಮಸ್ಯೆಗಳು ಸಹ ತಲೆಯೆತ್ತುವ ಸಾಧ್ಯತೆಗಳಿವೆ. 
 
ಡ್ರೋನ್‌ಗಳನ್ನು ಆಕಾಶಕ್ಕೆ ಕಳುಹಿಸಿ ಅಲ್ಲಿಂದ ಸರಕುಗಳನ್ನು ಕೆಳಗಿಳಿಸಲು ಪ್ಯಾರಾಚೂಟ್‌ಗಳನ್ನು ಬಳಸಲಿದೆ ಎಂದು ಅಮೆಜಾನ್ ತಿಳಿಸಿದೆ. ಕೆಳಗೆ ಬಿಟ್ಟ ಪ್ಯಾರಾಚೂಟ್ ಗಾಳಿಯ ರಭಸಕ್ಕೆ ಅತ್ತಇತ್ತ ಹೋಗುವ ಸಾಧ್ಯತೆಗಳಿಲ್ಲದಿಲ್ಲ. ಆ ಸಮಸ್ಯೆಗೂ ಪರಿಹಾರ ಕಂಡುಕೊಂಡಿರುವುದಾಗಿ ಅಮೆಜಾನ್ ತಿಳಿಸಿದೆ. 
 
ಪ್ಯಾರಾಚೂಟ್ ಕೆಳಗೆ ಇಳಿಯುವವರೆಗೂ ಡ್ರೋನ್ ಅಲ್ಲೇ ನಿಂತು ಗಮನಿಸುತ್ತಿರುತ್ತದೆ. ಒಂದು ವೇಳೆ ಪ್ಯಾರಾಚೂಟ್ ಪಕ್ಕಕ್ಕೆ ಹೋದರೆ ವಿಶೇಷ ಸಿಗ್ನಲ್ ಮೂಲಕ ಅದನ್ನು ಸರಿಯಾದ ಮಾರ್ಗದಲ್ಲಿ ಇಳಿಯುವಂತೆ ಮಾಡುತ್ತದೆ. ಅದಕ್ಕಾಗಿ ಪ್ಯಾರಾಚೂಟ್‍ನಲ್ಲೂ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಳ್ಳಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ