ವಿಶ್ವದ ಅತೀ ದೊಡ್ಡ ಸರಕು ವಿಮಾನ ಭಾರತಕ್ಕೆ

ಶುಕ್ರವಾರ, 13 ಮೇ 2016 (17:42 IST)
ಜಗತ್ತಿನ ಅತೀ ದೊಡ್ದ ಸರಕು ವಿಮಾನ ಅಂಟೊನೊವ್ ಎಎನ್-225 ಶುಕ್ರವಾರ ಮುಂಜಾನೆ ತುರ್ಕ್ಮಮೆನಿಸ್ಥಾನ್‌ನಿಂದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದೆ.
ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ವಿಮಾನ ಬೃಹದಾಕಾರದ ಮೇಲ್ಮೈ ಹೊಂದಿದ್ದು, ಆರು ಟರ್ಬೋಫ್ಯಾನ್ ಅಳವಡಿಸಲಾಗಿದೆ. ಈ ವಿಮಾನ 640 ಟನ್ ತೂಕ ಹೊಂದಿದ್ದು, ಸುಲಭದ ಕಾರ್ಯಾಚರಣೆಗಾಗಿ ಅಗಲವಾದ ಪಂಕಗಳನ್ನು ಹೊಂದಿದೆ.
 
ಈ ದೊಡ್ಡ ಗಾತ್ರದ ವಿಮಾನ 180ರಿಂದ 200 ಟನ್‌ವರೆಗೆ ಭಾರ ಹೊತ್ತೊಯ್ಯವ ಸಾಮರ್ಥ್ಯ ಹೊಂದಿದೆ.
 
ಭಾರತದಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸಲು ಅಗತ್ಯವಾದ ಸಾಮಗ್ರಿಗಳಿಗಾ ಗಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಪೆನ್ಸ್ ವಿಭಾಗ ಉಕ್ರೇನ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
 
ರಕ್ಷಣಾ ಇಲಾಖೆ ಬಲಪಡಿಸಲು ಸರ್ಕಾರ 200 ಮಧ್ಯಮ ಟರ್ಬೋಫ್ಯಾನ್ ಖರೀದಿಸಲು ಚಿಂತಿಸಿದ್ದು, ಇದಕ್ಕಾಗಿ 35,000 ಕೋಟಿ ಹಣವನ್ನು ಮೀಸಲಿಟ್ಟಿದೆ.

ವೆಬ್ದುನಿಯಾವನ್ನು ಓದಿ