ಬೆಂಗಳೂರಿನಲ್ಲಿ ತಯಾರಾಗಲಿದೆ ಆಪಲ್ ’ಐಫೋನ್’

ಶನಿವಾರ, 31 ಡಿಸೆಂಬರ್ 2016 (09:43 IST)
ಜಗತ್ತಿನಲ್ಲೇ ಅತ್ಯಂತ ಹೆಸರುವಾಸಿಯಾದ ಎಲೆಕ್ಟ್ರಾನಿಕ್ ಉತ್ಪನ್ನಗಳ ಸಂಸ್ಥೆ ಆಪಲ್ ಕಂಪನಿ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಐಫೋನ್ ತಯಾರಿಸಲು ಪ್ರಾರಂಭಿಸಲಿದೆ. ಸದ್ಯಕ್ಕೆ ಭಾರತದಲ್ಲಿ ಒಂದು ಫೋನ್‌ಗೆ ಶೇ.12.5ರಷ್ಟು ಆಮದು ಶುಲ್ಕ ವಿಧಿಸಲಾಗುತ್ತಿದೆ.
 
ಸ್ಥಳೀಯವಾಗಿ ತಯಾರಿಸಿದರೆ ಐಫೋನ್ ಬೆಲೆಗಳಲ್ಲಿ ಭಾರಿ ಇಳಿಕೆ ಆಗುವ ಸಾಧ್ಯತೆಗಳು ಅಧಿಕವಾಗಿವೆ. ಆಪಲ್ ಕಂಪನಿಯ ಪರಿಕರಗಳ ತಯಾರಿ (ಓಈಎಂ) ತೈವಾನ್ ಮೂಲದ ವಿಸ್ಟ್ರಾನ್, ಬೆಂಗಳೂರಿನ ಪೀಣ್ಯಾದಲ್ಲಿ ಐಫೋನ್ ತಯಾರಿ ಘಟಕ ಸ್ಥಾಪಿಸಲಿದೆ ಎಂದು ಮೂಲಗಳು ತಿಳಿಸಿವೆ.
 
ಗುಣಮಟ್ಟದ ಅತ್ಯಾಧುನಿಕ ತಾಂತ್ರಿಕ ಉತ್ಪನ್ನಗಳನ್ನು ತಯಾರು ಮಾಡುವ ನೈಪುಣ್ಯ ಇರುವುದರಿಂದ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಕಂಪನಿ ಹೇಳಿದೆ. ಆಪಲ್ ಡಿಸೈನ್, ಅಭಿವೃದ್ಧಿಗೆ ಸಂಬಂಧಿಸಿದ ವಿಭಾಗವನ್ನೂ ಇಲ್ಲೇ ಸ್ಥಾಪಿಸುತ್ತೇವೆ ಎಂದು ಆಪಲ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಟಿಮ್‍ಕುಕ್ ಈ ಹಿಂದೆಯೇ ಹೇಳಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ