ಅರುಣ್ ಜೇಟ್ಲಿಗೆ ಏಷ್ಯಾದ ಅತ್ಯುತ್ತಮ ಹಣಕಾಸು ಸಚಿವ ಪ್ರಶಸ್ತಿ

ಮಂಗಳವಾರ, 13 ಅಕ್ಟೋಬರ್ 2015 (21:05 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟಕ್ಕೆ ಸಂತಸದ ಸುದ್ದಿ. ಕೇಂದ್ರ ಹಣಕಾಸು ಅರುಣ್ ಜೇಟ್ಲಿಯವರನ್ನು ಏಷ್ಯಾದ ಅತ್ಯುತ್ತಮ ಹಣಕಾಸು ಸಚಿವ ಪ್ರಶಸ್ತಿಗೆ ಲಂಡನ್ ಮೂಲದ ಎಮರ್ಜಿಂಗ್ ಮಾರ್ಕೆಟ್ಸ್ ಸಂಸ್ಥೆ ಆಯ್ಕೆ ಮಾಡಿದೆ.
 
ಕಳೆದ 18 ತಿಂಗಳಲ್ಲಿ ವಿತ್ತ ಸಚಿವ ಜೇಟ್ಲಿಯವರ ಸಾರಥ್ಯದಲ್ಲಿ ಭಾರತ ಆರ್ಥಿಕತೆ ಚೇತರಿಕೆಯಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಸಂಸ್ಥೆ ಪ್ರಕಟಿಸಿದೆ. 
 
ಕಳೆದ ವರ್ಷ ದೇಶದ ಆರ್ಥಿಕತೆ ಚೇತರಿಕೆಯ ಶ್ರೇಯಸ್ಸಿಗೆ ಪ್ರಧಾನಿ ಮೋದಿ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್‌ ಕಾರಣ ಎಂದು ಎಮರ್ಜಿಂಗ್ ಮಾರ್ಕೆಟ್ಸ್ ಅವರ ಸಾಧನೆಯನ್ನು ಪರಿಗಣಿಸಿತ್ತು.  
 
ಕೇಂದ್ರ ಹಣಕಾಸು ಸಚಿವ ಜೇಟ್ಲಿಯವರ ನಿರ್ಧಾರವಿಲ್ಲದೇ ದೇಶದ ಆರ್ಥಿಕತೆಯ ಮಾರ್ಗಸೂಚಿಯಿಲ್ಲದೇ ಭಾರತ ಆರ್ಥಿಕ ಯಶಸ್ಸು ಕಾಣಲು ಸಾಧ್ಯವಿಲ್ಲ. ಆದ್ದರಿಂದ, ಜೇಟ್ಲಿಯವರನ್ನು ಏಷ್ಯಾದ ಅತ್ಯುತ್ತಮ ಹಣಕಸು ಸಚಿವ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಮ್ಯಾಗ್‌ಜಿನ್ ತಿಳಿಸಿದೆ.
 
ಕಳೆದ 2010ರಲ್ಲಿ ಪ್ರಣಬ್ ಮುಖರ್ಜಿಯವರನ್ನು ಏಷ್ಯಾದ ಅತ್ಯುತ್ತಮ ಹಣಕಾಸು ಸಚಿವ ಎಂದು ಎಮರ್ಜಿಂಗ್ ಮಾರ್ಕೆಟ್ಸ್ ಆಯ್ಕೆ ಮಾಡಿತ್ತು. ಕೇಂದ್ರ ಸರಕಾರ ಒತ್ತಡದಲ್ಲಿ ಸಿಲುಕಿರುವ ಖಾಸಗಿಕರಣ ಕಾರ್ಯಕ್ರಮವನ್ನು ಮುಂದುವರಿಸಿ ಹೂಡಿಕೆ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ ಮಾರಾಟದ ಉದ್ದೇಶವನ್ನು ಸುಲಭವಾಗಿಸಿದಲ್ಲಿ ಆರ್ಥಿಕತೆ ಚೇತರಿಕೆ ಕಾಣಲು ಸಾಧ್ಯ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.
 
ಕೇಂದ್ರ ಸಚಿವ ಜೇಟ್ಲಿಯವರ ಆರ್ಥಿಕ ನೀತಿಗಳಿಂದಾಗಿ ಭಾರತ ಯಾವುದೇ ಆರ್ಥಿಕ ಸವಾಲ್‌ನ್ನು ಎದುರಿಸಲು ಸಿದ್ದವಾಗುವಂತಾಗಿದೆ. ಐಎಂಎಫ್‌ ಪ್ರಸಕ್ತ ವರ್ಷವು ಶೇ.7.5ರಷ್ಟು ಜಿಡಿಪಿ ಬೆಳವಣಿಗೆ ತೋರುತ್ತಿದೆ. ಮುಂಬರುವ ದಿನಗಳು ಕಷ್ಟದ ದಿನಗಳಾಗಿದ್ದರೂ ಭಾರತ ಅಂತಹ ಒತ್ತಡಕ್ಕೆ ಸಿಲುಕುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ಎಮರ್ಜಿಂಗ್ ಮಾರ್ಕೆಟ್ಸ್ ವರದಿಯಲ್ಲಿ ತಿಳಿಸಿದೆ.
 

ವೆಬ್ದುನಿಯಾವನ್ನು ಓದಿ