ಶೇ. 6ರಷ್ಟು ಜನರಿಗೆ ಇಂಟರ್ನೆಟ್ ಚಟದಿಂದ ದುಷ್ಪರಿಣಾಮ

ಶನಿವಾರ, 20 ಡಿಸೆಂಬರ್ 2014 (17:53 IST)
ಜಗತ್ತಿನಲ್ಲಿ ಶೇ. 6ಕ್ಕಿಂತ ಹೆಚ್ಚು ಜನರು ಇಂಟರ್ನೆಟ್‌ಗೆ ದಾಸರಾಗಿದ್ದು, ಅವರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅವರ ಆರೋಗ್ಯ ಮತ್ತು ವೈಯಕ್ತಿಕ ಸಂಬಂಧಗಳ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಭಾರತದಿಂದ ಅಂಕಿಅಂಶವನ್ನೂ ಒಳಗೊಂಡಿರುವ ಹೊಸ ಜಾಗತಿಕ ಅಧ್ಯಯನ ತಿಳಿಸಿದೆ. 
 
 ಅಂತರ್ಜಾಲದ ಚಟವು ಪ್ರಚೋದನೆಯನ್ನು ನಿಯಂತ್ರಿಸುವಲ್ಲಿ ವಿಫಲತೆಯ  ಸಮಸ್ಯೆಯಾಗಿದ್ದು, ವ್ಯಕ್ತಿಯ ಜೀವನ, ಆರೋಗ್ಯ ಮತ್ತು ವೈಯಕ್ತಿಕ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಅಂತರ್ಜಾಲ ಚಟದ ಉಪಸ್ಥಿತಿ ಜಗತ್ತಿನ ಪ್ರದೇಶಗಳಲ್ಲಿ ವ್ಯತ್ಯಾಸ ಹೊಂದಿದೆ. 31 ರಾಷ್ಟ್ರಗಳ 89,000 ವ್ಯಕ್ತಿಗಳಿಂದ ಸಂಗ್ರಹಿಸಿದ ಅಂಕಿಅಂಶಗಳಿಂದ ಇದು ತಿಳಿದುಬಂದಿದೆ.ಚೀನಾ, ಹಾಂಕಾಂಗ್, ಭಾರತ, ದಕ್ಷಿಣ ಕೊರಿಯಾ ಮತ್ತು ತೈವಾನ್  ಅಂಕಿಅಂಶವನ್ನೂ ಒಳಗೊಂಡ ಏಷ್ಯಾದಲ್ಲಿ ಶೇ. 7.1ರಷ್ಟು ಜನರು ಅಂತರ್ಜಾಲಕ್ಕೆ ದಾಸರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ