ಮೊಬೈಲ್ ಮಾರುಕಟ್ಟೆಯಲ್ಲಿ ಎಲ್‌ಜಿ ಪಾಲು ನಾಚಿಕೆ ತರುವಂತಹದು: ಕಿ ವಾನ್

ಗುರುವಾರ, 1 ಸೆಪ್ಟಂಬರ್ 2016 (17:28 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಎಲ್‌ಜಿ, ಭಾರತೀಯ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಕಾರ್ಯಕ್ಷಮತೆ ಉತ್ತಮಗೊಳಿಸುವ ನಿಟ್ಟಿನಲ್ಲಿ, ತನ್ನ ಸ್ಮಾರ್ಟ್‌ಪೋನ್‌ಗಳ ಮಾರುಕಟ್ಟೆಯ ವಹಿವಾಟು ತಂತ್ರವನ್ನು ಮರು ಮೌಲ್ಯಮಾಪನ ನಡೆಸಲು ಸಿದ್ಧತೆ ನಡೆಸಿದೆ. 
 
ಎಲ್‌ಜಿ ಸ್ಮಾರ್ಟ್‌ಪೋನ್ ವಿಭಾಗದ ಕುರಿತು ಮಾತನಾಡುವಾಗ ನನಗೆ ತಲೆತಗ್ಗಿಸುವಂತ ಭಾವನೆ ಮೂಡುತ್ತಿದೆ. ಭಾರತೀಯ ಗ್ರಾಹಕರು ಎಲ್‌ಜಿ ಸ್ಮಾರ್ಟ್‌ಪೋನ್‌ಗಳನ್ನು ಏಕೆ ಇಷ್ಟ ಪಡುತ್ತಿಲ್ಲ ಎನ್ನುವುದರ ಕುರಿತು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಮತ್ತು, ಎಲ್‌ಜಿ ಪೋನ್‌ಗಳು ಭಾರತದ ನಿರ್ದಿಷ್ಟ ಉತ್ಪನ್ನಗಳಾಗುತ್ತಿಲ್ಲ?. ನಾವು ಸರಿಯಾದ ಮಾರಾಟ ಪ್ರಕ್ರಿಯೆಯನ್ನು ಅನುಸರಿಸಿದಲ್ಲಿ ದೇಶದಲ್ಲಿ ಗಮನಾರ್ಹ ಮಾರುಕಟ್ಟೆ ಪಾಲನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಭಾರತದ ಎಲ್‌ಜಿ ಎಲೆಕ್ಟ್ರಾನಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಕಿ ವಾನ್ ಕಿಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ತನ್ನ ಕಳಪೆ ಪ್ರದರ್ಶನದ ಕುರಿತು ಎಲ್‌ಜಿ ಸಂಸ್ಥೆ ಕಾರಣಗಳನ್ನು ಹುಡುಕುತ್ತಿದೆ. ಕೊರಿಯಾ ಮೂಲದ ದೈತ್ಯ ಸ್ಯಾಮ್‌ಸುಂಗ್ ಕಂಪೆನಿ, ಫೋನ್‌ಗಳ ಉತ್ಪಾದನೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಆದರೆ, ಎಲ್‌ಜಿ ಸಂಸ್ಥೆಯ ಐಷಾರಾಮಿ ಪೋನ್‌ಗಳು ಭಾರತೀಯ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 
 
ಎಲ್‌ಜಿ ಸಂಸ್ಥೆ ಮಾಸಾಂತ್ಯಕ್ಕೆ ವಿ-20 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಿ ವಾನ್ ಕಿಮ್ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ