ಪಡಿತರ ಅಕ್ಕಿ, ಗೋಧಿ ಬದಲಿಗೆ ಬ್ಯಾಂಕ್ ಖಾತೆಗೆ ನಗದು ವರ್ಗಾವಣೆ

ಮಂಗಳವಾರ, 24 ಫೆಬ್ರವರಿ 2015 (14:00 IST)
ಭೂ ಸ್ವಾಧೀನ ಸುಗ್ರೀವಾಜ್ಞೆ ವಿರುದ್ಧ ಸರ್ಕಾರ ಟೀಕಾಪ್ರವಾಹ ಎದುರಿಸುತ್ತಿರುವ ನಡುವೆ, ಆಹಾರ ಸಬ್ಸಿಡಿ ಪಾವತಿಗಳನ್ನು ನಗದು ವರ್ಗಾವಣೆ ಮೂಲಕ ನೆರವೇರಿಸಲು ಹಿಂಬಾಗಿಲ ಮಾರ್ಗವನ್ನು ಸರ್ಕಾರ ಹಿಡಿದಿದೆಯೇ ಎಂಬ ಆತಂಕ ಆವರಿಸಿದೆ.ಸದ್ಯಕ್ಕೆ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಅರ್ಹರಾದವರಿಗೆ ಸರ್ಕಾರ ಸಬ್ಸಿಡಿ ದರದಲ್ಲಿ ನಿಗದಿತ ಕೋಟಾ ಅಕ್ಕಿ ಮತ್ತು ಗೋದಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುತ್ತಿದೆ.

ಆಹಾರ ಭದ್ರತೆ ಮಸೂದೆ ಮೂಲಕ ಆ ಸಬ್ಸಿಡಿ ಹೆಜ್ಜೆಗುರುತು ಜನಸಂಖ್ಯೆ ಮತ್ತು ಧಾನ್ಯದ ಪ್ರಮಾಣಕ್ಕೆ ಸಂಬಂಧಿಸಿದಂತೆ  ಏರಿಕೆಯಾಗಿದೆ. ಆದರೆ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ದೀಪಕ್ ಕುಮಾರ್ ರಾಜ್ಯಗಳ ಎಲ್ಲಾ ಆಹಾರ ಇಲಾಖೆಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ನಗದು ವರ್ಗಾವಣೆ ಅಥವಾ ಡಿಬಿಟಿಯನ್ನು ಜಾರಿಗೆ ತರಲು ಯೋಜಿಸಿರುವುದಾಗಿ ತಿಳಿಸಿದ್ದಾರೆ.

 ನಗದು ವರ್ಗಾವಣೆ ವಿವಾದಾತ್ಮಕ ವಿಷಯವಾಗಿದ್ದು, ಇದು ಪಡಿತರ ವ್ಯವಸ್ಥೆ ರದ್ದುಮಾಡುತ್ತದೆ. ಅಗ್ಗದ ದರದಲ್ಲಿ ಧಾನ್ಯ ನೀಡುವ ಬದಲಿಗೆ ಸಬ್ಸಿಡಿ ಮೊತ್ತವನ್ನು ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಅವರು ಮುಕ್ತ ಪೇಟೆಯಲ್ಲಿ ಮಾರುಕಟ್ಟೆ ದರದಲ್ಲಿ ಧಾನ್ಯ ಖರೀದಿಸಬೇಕಾಗುತ್ತದೆ. ಇದು ಪಡಿತರದಲ್ಲಿ ಭ್ರಷ್ಟಾಚಾರ ನಿವಾರಿಸುತ್ತದೆಂದು ನಂಬಲಾಗಿದ್ದರೂ ದರ ಏರಿಕೆಯ ಕಷ್ಟನಷ್ಟಗಳಿಗೆ ಬಡವರು ಗುರಿಯಾಗುತ್ತಾರೆಂಬ ಆತಂಕ ಕೇಳಿಬಂದಿದೆ.

ವೆಬ್ದುನಿಯಾವನ್ನು ಓದಿ