ಮೂರು ಲಕ್ಷ ತ್ರಿಚಕ್ರ ವಾಹನ ಮಾರಾಟದ ಗುರಿ ಹೊಂದಿರುವ ಬಜಾಜ್

ಬುಧವಾರ, 20 ಏಪ್ರಿಲ್ 2016 (14:21 IST)
ಬಜಾಜ್ ಆಟೋ ತಯಾರಿಕಾ ಸಂಸ್ಥೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ 3 ಲಕ್ಷ ತ್ರಿಚಕ್ರ ವಾಹನಗಳ ಮಾರುಟದ ಗುರಿ ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆಯ ಒಟ್ಟು ಮಾರಾಟದಲ್ಲಿ 17 ಪ್ರತಿಶತ ಹೆಚ್ಚಳ ಕಂಡಿತ್ತು.
2015-16 ರ ಆರ್ಥಿಕ ವರ್ಷದಲ್ಲಿ ಪುಣೆ ಮೂಲದ ಘಟಕ 2,54,967 ತ್ರಿಚಕ್ರ ವಾಹನವನ್ನು ಮಾರಾಟ ಮಾಡಿದೆ. 
 
ಸಂಸ್ಥೆ ಸಿದ್ಧ ಪಡಿಸಿರುವ ಹೊಸ ಆವೃತ್ತಿಯ ಡಿಸೇಲ್ ಪ್ಯಾಸೆಂಜರ್ ವಾಹನಗಳಿಗೆ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ್ತಿದ್ದು, ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. 2016-17 ರ ಆರ್ಥಿಕ ವರ್ಷದಲ್ಲಿ ಹೆಚ್ಚು ವಾಹನಗಳ ಮಾರಾಟ ಮಾಡುವ ಮೂಲಕ ತ್ರಿಚಕ್ರ ವಾಹನ ಮಾರಾಟದಲ್ಲಿ ನಾಯಕತ್ವ ವಹಿಸಲಿದ್ದೇವೆ ಎಂದು ಬಜಾಜ್ ಆಟೋ ಸಂಸ್ಥೆಯ ಅಧ್ಯಕ್ಷ ಆರ್.ಸಿ.ಮಹೇಶ್ವರಿ ತಿಳಸಿದ್ದಾರೆ.
 
ಪೆಟ್ರೋಲ್ ಇಂಜಿನ್ ಹೊಂದಿರುವ ವಾಹನಗಳ ಮಾರಾಟದಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, ಮಾರುಕಟ್ಟೆಯಲ್ಲಿ 90 ಪ್ರತಿಶತ ಶೇರುಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
 
2015-16 ರ ಆರ್ಥಿಕ ವರ್ಷದಲ್ಲಿ ಬಜಾಜ್ ಆಟೋ ಸಂಸ್ಥೆ, ಹೊಸ ಆವೃತ್ತಿಯ ಡೀಸೆಲ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
 
ಡೀಸೆಲ್ ಇಂಜನ್ ಹೊಂದಿರುವ ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ 6 ಪ್ರತಿಶತ ಹೆಚ್ಚಳವಾಗಿದ್ದು, ಸಂಸ್ಥೆ ಸಿದ್ಧ ಪಡಿಸಿರುವ ತ್ರಿಚಕ್ರ ಹೊಂದಿರುವ ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ 2 ಪ್ರತಿಶತ ಕುಸಿತ ಕಂಡಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ