ಬಜಾಜ್ ಅಟೋದಿಂದ 10 ಸಾವಿರ ಕ್ಯೂಟೆ ವಾಹನಗಳ ರಫ್ತು ನಿರೀಕ್ಷೆ

ಗುರುವಾರ, 7 ಏಪ್ರಿಲ್ 2016 (18:43 IST)
ನವದೆಹಲಿ: ಬಜಾಜ್ ಆಟೋ ತಯಾರಿಕಾ ಸಂಸ್ಥೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹತ್ತು ಸಾವಿರ ಕ್ವಾಡ್ರಿಸೈಕಲ್ ಕ್ಯುಟೆ ವಾಹನಗಳನ್ನು ರಫ್ತು ಮಾಡುವ ಗುರಿ ಹೊಂದಿದೆ ಎಂದು ತಿಳಿಸಿದೆ. 
ನಾಲ್ಕು ಚಕ್ರವುಳ್ಳ ಕ್ಯುಟೆ  ವಾಹನಗಳು ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಹೊಂದಿದ್ದು, ಟರ್ಕಿ, ರಷ್ಯಾ, ಇಂಡೋನೇಷ್ಯಾ ಮತ್ತು ಪೆರು ರಾಷ್ಟ್ರಗಳು ಸೇರಿದಂತೆ 19 ಮಾರುಕಟ್ಟೆಯಲ್ಲಿ 334 ವಾಹನಗಳು ಮಾರಾಟವಾಗಿವೆ ಎಂದು ಬಜಾಜ್ ಆಟೋ ಸಂಸ್ಥೆಯ ವ್ಯಾಪಾರ ಅಭಿವೃದ್ಧಿ ಮತ್ತು ಅಶ್ಯೂರೆನ್ಸ್ ವಿಭಾಗದ ಅಧ್ಯಕ್ಷ ಎಸ್ ರವಿಕುಮಾರ್ ತಿಳಿಸಿದ್ದಾರೆ.
 
ಪ್ರಸಕ್ತ ವರ್ಷದಲ್ಲಿ ಯಾವುದೆ ವಿನಾಯಿತಿ ಇಲ್ಲದೆ 500 ಕ್ಯುಟೆ ವಾಹನಗಳನ್ನು ರಫ್ತು ಮಾಡಲಿದ್ದು, ಸಂಸ್ಥೆ, 2017 ರ ಆರ್ಥಿಕ ವರ್ಷದಲ್ಲಿ 10 ಸಾವಿರ ವಾಹನಗಳನ್ನು ರಫ್ತು ಮಾಡುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.
 
ಈ ವಾಹನಗಳು ಹೆಚ್ಚು ಸುರಕ್ಷತೆ ಹೊಂದಿದ್ದು, ಕಡಿಮೆ ಹೊಗೆಯನ್ನು ಹೊರಸೂಸುತ್ತವೆ ಮತ್ತು ಕಡಿಮೆ ಇಂಧನದಲ್ಲಿ ಬಳಕೆಯಾಗುತ್ತದೆ ಎಂದು ತಿಳಿಸಿದ್ದಾರೆ.
 
ಕ್ಯುಟೆ  ವಾಹನಗಳು ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಶಕ್ತಿ ಸಾಮರ್ಥ್ಯ ಹೊಂದಿದ್ದು, ಭಾರತದಲ್ಲಿ ಕ್ಲಿಯರೆನ್ಸ್ ಸಿಕ್ಕರೆ ಭಾರತದ ಮಾರುಕಟ್ಟೆಗೂ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ