ಬಜಾಜ್ ಅಟೋ ವಾಹನಗಳ ಮಾರಾಟದಲ್ಲಿ ಶೇ.22 ರಷ್ಟು ಹೆಚ್ಚಳ

ಸೋಮವಾರ, 4 ಏಪ್ರಿಲ್ 2016 (15:20 IST)
ಪುಣೆ: ದೇಶದ  ದ್ವಿಚಕ್ರ ವಾಹನ ತಯಾರಿಕೆ ಕಂಪೆನಿಗಳಲ್ಲಿ ಪ್ರಮುಖ ಪಾಲು ಹೊಂದಿರುವ ಬಜಾಜ್ ಅಟೋ ಕಂಪೆನಿ, ಕಳೆದ ವರ್ಷದ ಇದೇ ಮಾರ್ಚ್ ತಿಂಗಳಿಗೆ ಹೋಲಿಸಿದಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.22 ರಷ್ಟು ಹೆಚ್ಚಳವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಮಾರ್ಚ್ 2014- 2015ರಲ್ಲಿ 2.5 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿತ್ತು.ಇದೀಗ 2015-2016 ಸಾಲಿನಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.22 ರಷ್ಟು ಹೆಚ್ಚಳವಾಗಿ 3.06 ವಾಹನಗಳನ್ನು ಮಾರಾಟ ಮಾಡಲಾಗಿದೆ. 
 
ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.2 ರಷ್ಟು ಏರಿಕೆಯಾಗಿ 41,551 ವಾಹನಗಳನ್ನು ಮಾರಾಟ ಮಾಡಿ ಇತಿಹಾಸ ನಿರ್ಮಿಸಲಾಗಿದೆ. ರಫ್ತು ವಹಿವಾಟಿನಲ್ಲಿ ಕೂಡಾ ಶೇ.3 ರಷ್ಟು ಚೇತರಿಕೆಯಾಗಿದ್ದು 1.02 ಲಕ್ಷ ವಾಹನಗಳನ್ನು ಮಾರಾಟ ಮಾಡಲಾಗಿದೆ. 
 
ಎರಡು ವರ್ಷಗಳಲ್ಲಿ 32,92 ಲಕ್ಷ ಮೋಟಾರ್ ಸೈಕಲ್ ಮಾರಾಟಹೊಂದಿದ್ದು ಪ್ರಸಕ್ತ ವರ್ಷದಲ್ಲಿ 33,58 ಲಕ್ಷ ಮಾರಾಟದ ಗಡಿದಾಟಿದೆ. ಒಟ್ಟು ಮಾರಾಟದಲ್ಲಿ 2 ಪ್ರತಿಶತ ಏರಿಕೆ ಕಂಡಿದೆ.

ವೆಬ್ದುನಿಯಾವನ್ನು ಓದಿ