ದೆಹಲಿಯಲ್ಲಿ ಹಳೇ ವಾಹನಗಳಿಗೆ ನಿಷೇಧ: ತಡೆಯಾಜ್ಞೆ ಕೋರಿದ ಕೇಂದ್ರ

ಸೋಮವಾರ, 27 ಏಪ್ರಿಲ್ 2015 (18:42 IST)
15 ವರ್ಷಕ್ಕಿಂತ ಹೆಚ್ಚು ಹಳೆಯದಾದ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಗಳ ಡೀಸೆಲ್ ವಾಹನಗಳ ಮೇಲಿನ ನಿಷೇಧಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೇಂದ್ರ ಸರ್ಕಾರ ಸೋಮವಾರ ರಾಷ್ಟ್ರೀಯ ಗ್ರೀನ್ ಟ್ರಿಬ್ಯೂನಲ್‌ಗೆ ಅರ್ಜಿ ಸಲ್ಲಿಸಿದೆ.  ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ತಡೆಗೆ ಕ್ರಮಗಳನ್ನು ಸಲಹೆ ಮಾಡಲು ಕೇಂದ್ರ ಸರ್ಕಾರ 6 ತಿಂಗಳು ಕಾಲಾವಧಿ ಕೇಳಿದೆ.
 
ಏತನ್ಮಧ್ಯೆ ಸುಪ್ರೀಂಕೋರ್ಟ್ ಕೂಡ ರಾಷ್ಟ್ರೀಯ ಗ್ರೀನ್ ಟ್ರಿಬ್ಯೂನಲ್ ಆದೇಶವನ್ನು ಎತ್ತಿಹಿಡಿದಿತ್ತು. ಈ ತಿಂಗಳ ಆರಂಭದಲ್ಲಿ ಗ್ರೀನ್ ಟ್ರಿಬ್ಯೂನಲ್ ದೆಹಲಿ, ಹರ್ಯಾಣ ಮತ್ತು ಉತ್ತರಪ್ರದೇಶ ಸರ್ಕಾರಗಳನ್ನು ಮಾಲಿನ್ಯ ನಿಭಾಯಿಸಲು ತನ್ನ 2014ರ ಆದೇಶ ಪಾಲಿಸದಿರುವ ಬಗ್ಗೆ ತರಾಟೆಗೆ ತೆಗೆದುಕೊಂಡಿತು.

 ವಿಶ್ವಆರೋಗ್ಯ ಸಂಸ್ಥೆ ವರದಿ ಪ್ರಕಾರ, ದೆಹಲಿಯುಜಗತ್ತಿನಲ್ಲೇ ಅತೀ ಕೆಟ್ಟ ವಾಯುಗುಣಮಟ್ಟ ಹೊಂದಿದ್ದು, ವಿಶ್ವದ ಅತೀ ಕೆಟ್ಟ ವಾಯು ಗುಣಮಟ್ಟದಲ್ಲಿ ಇನ್ನೂ 12 ಭಾರತೀಯ ನಗರಗಳು ಸೇರಿವೆ. 
 

ವೆಬ್ದುನಿಯಾವನ್ನು ಓದಿ