ನಾಳೆಯಿಂದ ಬ್ಯಾಂಕ್ ನೌಕರರ ಮುಷ್ಕರ

ಗುರುವಾರ, 28 ಜುಲೈ 2016 (20:07 IST)
ಕೇಂದ್ರ ಸರಕಾರದ ಬ್ಯಾಂಕಿಂಗ್ ಸುಧಾರಣೆ ನೀತಿಗಳ ಘೋಷಣೆ ಮತ್ತು ಸಹೋದರ ಬ್ಯಾಂಕ್‌ಗಳನ್ನು ಎಸ್‌ಬಿಐನಲ್ಲಿ ವಿಲೀನಗೊಳಿಸುವ ಕ್ರಮವನ್ನು ವಿರೋಧಿಸಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ನಾಳೆಯಿಂದ ಮುಷ್ಕರ ಆರಂಭಿಸಲಿರುವುದರಿಂದ ಬ್ಯಾಂಕ್‌ ಕಾರ್ಯಗಳಿಗೆ ಅಡೆತಡೆ ಉಂಟಾಗಲಿವೆ.
 
ಎಂಟು ಲಕ್ಷ ಸಿಬ್ಬಂದಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡಿರುವ ಯುನೈಟೆಡ್ ಫೋರಮ್ ಆಫ್ ಬ್ಯಾಕ್ಸ್‌ ಯುನಿಯನ್ ನಾಳೆಯಿಂದ ಮುಷ್ಕರದಲ್ಲಿ ಭಾಗಿಯಾಗುವುದರಿಂದ ಗ್ರಾಹಕರಿಗೆ ತೀವ್ರವಾದ ತೊಂದರೆ ಎದುರಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.  
 
ಎಸ್‌ಬಿಐ ಸೇರಿದಂತೆ ಇತರ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಜುಲೈ 29 ರಂದು ನಡೆಯುವ ಮುಷ್ಕರದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಬ್ಯಾಂಕ್‌ ಯುನಿಯನ್‌ಗಳು ಸ್ಪಷ್ಟಪಡಿಸಿವೆ. 
 
ಆಲ್ ಇಂಡಿಯಾ ಸ್ಟೇಟ್ ಬ್ಯಾಂಕ್ ಅಧಿಕಾರಿಗಳ ಫೆಡರೇಶನ್ ಮತ್ತು ಆಲ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್ ಯುನೈಟೆಡ್ ಫೋರಮ್‌ ಸಂಘಟನೆಯ ಸದಸ್ಯರಾಗಿದ್ದರಿಂದ ಮುಷ್ಕರದ ಬಿಸಿ ಬ್ಯಾಂಕ್‌‌ಗಳಿಗೂ ತಟ್ಟಲಿದೆ ಎಂದು ಎಸ್‌ಬಿಐ ತಿಳಿಸಿದೆ. 
 

ವೆಬ್ದುನಿಯಾವನ್ನು ಓದಿ