ಸಾಲದ ದರವನ್ನು ಶೇ. 0.25ರಷ್ಟು ಕಡಿತ ಮಾಡಿದ ಬ್ಯಾಂಕ್ ಆಫ್ ಇಂಡಿಯಾ

ಶನಿವಾರ, 2 ಮೇ 2015 (19:37 IST)
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ ಶನಿವಾರ ಮೂಲ ದರ ಅಥವಾ ಬೆಂಚ್‌ಮಾರ್ಕ್ ಸಾಲದ ದರವನ್ನು ಶೇ. 0.25ಕ್ಕೆ ಕಡಿತಮಾಡಿದ್ದರಿಂದ ಸಾಲದ ಬಡ್ಡಿದರ ಶೇ. 9.95ಕ್ಕೆ ಮುಟ್ಟಿದೆ. ಇದರಿಂದಾಗಿ ವಾಹನ , ಗೃಹ ಮತ್ತಿತರ ಸಾಲವು ಅಗ್ಗವಾಗಲಿದೆ. ಹೊಸ ದರವು ಮೇ 4ರಿಂದ ಜಾರಿಗೆ ಬರುತ್ತದೆ. 
 
 ಮೂಲ ದರದಲ್ಲಿ ಕಡಿತದಿಂದ ಸಾಲದಾರರಿಗೆ ಅನುಕೂಲವಾಗುತ್ತದೆ. ಏಕೆಂದರೆ ವಾಹನ, ಗೃಹ ಮತ್ತು ಇತರೆ ಸಾಲಗಳು ಅದರ ಜೊತೆ ಕೊಂಡಿ ಕಲ್ಪಿಸುತ್ತದೆ. 
 
ಸ್ಟೇಟ್ ಬ್ಯಾಂಕ್ ಸೇರಿದಂತೆ ಅನೇಕ ಇತರೆ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳಾದ ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸಾಲ ದರವನ್ನು 0.15ರಿಂದ 0.25ಕ್ಕೆ ಕಡಿತ ಮಾಡಿವೆ. ಕಳದ ಜನವರಿಯಿಂದ ಆರ್‌ಬಿಐ ಎರಡು ಹಂತಗಳಲ್ಲಿ ಪಾಲಿಸಿ ದರವನ್ನು ಶೇ. 0.5ಕ್ಕೆ ಕಡಿತಮಾಡಿದೆ. ಸಾಲಗಾರರಿಗೆ ಬಡ್ಡಿದರ ಕಡಿತ ಮಾಡದ ಬ್ಯಾಂಕ್‌ಗಳನ್ನು ಉಲ್ಲೇಖಿಸಿ ರಾಜನ್ ನಾನ್ಸೆನ್ಸ್ ಎಂದು ಉದ್ಗರಿಸಿದ್ದರು. 
 

ವೆಬ್ದುನಿಯಾವನ್ನು ಓದಿ