ಎರಡು ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌‌ಗಳಿಗೆ ರಜೆ

ಸೋಮವಾರ, 23 ಫೆಬ್ರವರಿ 2015 (19:50 IST)
ಸ್ಟೇಟ್ ಆಫ್ ಇಂಡಿಯಾ ಸೇರಿದಂತೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಒಂದು ಶನಿವಾರ ಕೆಲಸ ಮಾಡಿದರೆ ಇನ್ನೊಂದು ಶನಿವಾರ ಮುಚ್ಚಲಾಗುತ್ತದೆ. ನೌಕರರ ಸಂಘಟನೆ ಮತ್ತು ಭಾರತದ ಬ್ಯಾಂಕ್ ಸಂಘಟನೆ ನಡುವೆ ಒಪ್ಪಂದದ ಪ್ರಕಾರ ಪರ್ಯಾಯ ಶನಿವಾರಗಳಂದು ಬ್ಯಾಂಕ್ ಮುಚ್ಚಲಾಗುತ್ತದೆ.

ನೌಕರರ ಸಂಘಟನೆ ಐದು ದಿನಗಳ ವಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಆದರೆ ಪರ್ಯಾಯ ಶನಿವಾರಗಳಂದು ಮಾತ್ರ ರಜೆ ಘೋಷಿಸುವ ಒಪ್ಪಂದಕ್ಕೆ ಬರಲಾಗಿದೆ. ಇದರಿಂದ ಎರಡು ಡಜನ್‌ಗೂ ಹೆಚ್ಚು ಬ್ಯಾಂಕ್‌ಗಳು ಪರ್ಯಾಯ ಶನಿವಾರಗಳಲ್ಲಿ ಮುಚ್ಚಿರುತ್ತವೆ.ಎರಡು ಮತ್ತು ನಾಲ್ಕನೇ ಶನಿವಾರಗಂದು ರಜಾ ನೀಡುವ ದೀರ್ಘಕಾಲದ ಬೇಡಿಕೆಗೆ ಒಪ್ಪಿಗೆ ನೀಡಲಾಗಿದೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ವೆಂಕಟಾಚಲಂ ತಿಳಿಸಿದರು.

7 ಲಕ್ಷ ನೌಕರರಿಗೆ ಶೇ. 15ರಷ್ಟು ವೇತನ ಏರಿಕೆ ಮಾಡುವ ಒಪ್ಪಂದಕ್ಕೆ ಕೂಡ ಬರಲಾಗಿದೆ. ನವೆಂಬರ್ 2012ರಿಂದ ಪೂರ್ವಾನ್ವಯವಾಗಿ ಈ ವೇತನ ಜಾರಿಗೆ ಬರುತ್ತದೆ ಮತ್ತು ಐದು ವರ್ಷಗಳ ಕಾಲ ಇರುತ್ತದೆ.

ವೆಬ್ದುನಿಯಾವನ್ನು ಓದಿ