ನಾಳೆ ಬ್ಯಾಂಕ್‌ಗಳು, ವಿಮಾ ಸಂಘಟನೆಗಳಿಂದ ಕೂಡ ಮುಷ್ಕರ

ಮಂಗಳವಾರ, 1 ಸೆಪ್ಟಂಬರ್ 2015 (21:04 IST)
ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಸರ್ಕಾರಿ ಸ್ವಾಮ್ಯದ ಜೀವವಿಮಾ ರಹಿತ ಕಂಪನಿಗಳು ಬುಧವಾರ ಕೇಂದ್ರ ಸರ್ಕಾರದ ಕಾರ್ಮಿಕ ಸಂಘಟನೆ  ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆಗೆ ಮುಷ್ಕರಕ್ಕೆ ಇಳಿದಿವೆ. 
 
ಜೀವವಿಮಾ ರಹಿತ ನೌಕರರ ಸಂಘಟನೆಯ ಜಂಟಿ ಕಾರ್ಯದರ್ಶಿ ಕೆ. ಗೋವಿಂದನ್ ಪ್ರಕಾರ, ಸಂಘಟನೆಗಳು ವೇತನ ಮಾತುಕತೆಯ ಶೀಘ್ರ ಮುಕ್ತಾಯ, ಬಡ್ತಿ ನೀತಿಯನ್ನ ಅಂತಿಮಗೊಳಿಸುವುದು ಮತ್ತು ಹೊರಗುತ್ತಿಗೆ ರದ್ದುಮಾಡುವುದಕ್ಕೆ ಒತ್ತಾಯಿಸುತ್ತಿದೆ. 
 
ಇವು ಕಾರ್ಮಿಕರ ಹಕ್ಕು ಮತ್ತು ಸೌಲಭ್ಯಗಳ ಮೇಲೆ ದಾಳಿ ಎಂದು ಅಖಿಲ ಭಾರತ ನೌಕರರ ಸಂಧಟನೆಯ ಪ್ರಧಾನಕಾರ್ಯದರ್ಶಿ ವೆಂಕಟಾಚಲಂ ಹೇಳಿದ್ದಾರೆ.ಮಾಲೀಕರ ಪರವಾಗಿ ಕಾರ್ಮಿಕ ಕಾನೂನುಗಳನ್ನು ತಿದ್ದುವ ಬಹಿರಂಗ ಪ್ರಯತ್ನಗಳು ನಡೆಯುತ್ತಿವೆ. ನವ ಉದಾರವಾದಿ ಆರ್ಥಿಕ ನೀತಿಗಳು ಕಾರ್ಮಿಕರ ಮತ್ತು ಜನಸಮೂಹದ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡುತ್ತವೆ ಎಂದು ಅವರು ಪ್ರತಿಪಾದಿಸಿದರು. 
 

ವೆಬ್ದುನಿಯಾವನ್ನು ಓದಿ