ಬ್ಯಾಂಕ್‌ಗಳಿಗೆ ಮಾರ್ಚ್ 28ರಿಂದ ಸಾಲು, ಸಾಲು ರಜೆ: ಗ್ರಾಹಕರಿಗೆ ಪರದಾಟ

ಶುಕ್ರವಾರ, 27 ಮಾರ್ಚ್ 2015 (13:38 IST)
ಬ್ಯಾಂಕ್‌ಗಳಿಗೆ ಒಂದಾದ ಮೇಲೆ ಒಂದರಂತೆ 9 ಸರಣಿ ರಜಾದಿನಗಳು ಬಂದಿರುವುದರಿಂದ ಷೇರುಪೇಟೆಗಳ ವಹಿವಾಟುಗಳಿಗೆ, ರಫ್ತು ಮತ್ತು ವೇತನ ಪಾವತಿಗಳಿಗೆ ಅಡ್ಡಿಯಾಗುತ್ತದೆ ಎಂದು ಅಸೋಚಾಮ್ ತಿಳಿಸಿದೆ.  ಈ ಬಿಕ್ಕಟ್ಟಿನ ನಿವಾರಣೆಗೆ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದೂ ಅದು ತಿಳಿಸಿದೆ. 
 
 
ರಿಸರ್ವ್ ಬ್ಯಾಂಕ್ ಮಧ್ಯ ಪ್ರವೇಶ ಮಾಡಿ ಬ್ಯಾಂಕ್‌ಗಳಿಗೆ ಕೆಲವು ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಬೇಕು. ಗ್ರಾಹಕರಿಗಾಗುವ ವ್ಯಾಪಕ ಅನಾನುಕೂಲ ಮತ್ತು ಉದ್ಯಮ ವಲಯಕ್ಕೆ ಉಂಟಾಗುವ ಅಡ್ಡಿಗಳನ್ನು ನಿವಾರಿಸಲು ಹಣಕಾಸು ಸಚಿವಾಲಯ ಬ್ಯಾಂಕ್ ಆಡಳಿತ ಮಂಡಳಿಗಳಿಗೆ ಸೂಚಿಸಬೇಕು ಎಂದು ಅಸೋಚಾಮ್ ಪ್ರಧಾನ ಕಾರ್ಯದರ್ಶಿ ಡಿ.ಎಸ್. ರಾವತ್ ಹೇಳಿದರು. 
 
ಮಾರ್ಚ್ 28ರಂದು ರಾಮನವಮಿ ಪ್ರಯುಕ್ತ ಬ್ಯಾಂಕ್‌ಗಳಿಗೆ ರಜೆ. ಅದರ ಹಿಂದೆ ಭಾನುವಾರ ರಜಾ ದಿನ. ಮಾರ್ಚ್ 30 ಸೋಮವಾರ ಬ್ಯಾಂಕ್ ತೆರೆದರೂ ಪುನಃ ಮಾರ್ಚ್ 31 ಮತ್ತು ಏಪ್ರಿಲ್ 1ರಂದು ವಾರ್ಷಿಕ ಲೆಕ್ಕಪತ್ರ ಪರಿಶೋಧನೆಗೆ ಬ್ಯಾಂಕ್‌ಗಳಿಗೆ ರಜಾ.  ಏಪ್ರಿಲ್ 2ರಂದು ಮಹಾವೀರ ಜಯಂತಿ ಪ್ರಯುಕ್ತ ರಜೆ. ಏಪ್ರಿಲ್ 3ರಂದು ಗುಡ್ ಫ್ರೈಡೇ ರಜಾ.  ಮರುದಿನ ಶನಿವಾರ ಕೆಲವೇ ಗಂಟೆಗಳ ಕಾಲ ಬ್ಯಾಂಕ್ ಕೆಲಸ ಮಾಡುತ್ತದೆ. ಏಪ್ರಿಲ್ 5 ಪುನಃ ಭಾನುವಾರ ಬ್ಯಾಂಕ್‌ಗಳಿಗೆ ರಜೆ. ಹೀಗೆ ಸಾಲು ಸಾಲು ರಜಾದಿನಗಳಿಂದ ಗ್ರಾಹಕರ ಹಣಕಾಸು ವಹಿವಾಟಿಗೆ ಅಡ್ಡಿಯಾಗುತ್ತದೆ ಮತ್ತು ರಜಾ ದಿನಗಳಲ್ಲಿ ಎಟಿಎಂಗಳು ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ