ಜಿನೀವಾದಲ್ಲಿ ಬಿಯರ್ ಅತೀ ದುಬಾರಿ, ದೆಹಲಿ ಐದನೇ ಅಗ್ಗದ ನಗರ

ಮಂಗಳವಾರ, 30 ಜೂನ್ 2015 (21:09 IST)
ಮುಂದಿನ ರಜಾ ದಿನಗಳಲ್ಲಿ ಬಿಯರ್ ಪ್ರಿಯ ಪ್ರವಾಸಿಗಳು ದೆಹಲಿಗೆ ಲಗ್ಗೆ ಹಾಕಿದರೆ ಒಳ್ಳೆಯದು. ಏಕೆಂದರೆ ದೆಹಲಿಯಲ್ಲಿ 330 ಮಿಲೀ ಸೀಸೆಗೆ ಸರಾಸರಿ ದರವು ಕೇವಲ 1.75 ಅಮೆರಿಕ ಡಾಲರ್. ವಿಶ್ವಾದ್ಯಂತ 75 ನಗರಗಳ ಪಟ್ಟಿಯಲ್ಲಿ ಬಿಯರ್ ದರ ದೆಹಲಿಯಲ್ಲಿ ಐದನೇ ಅತೀ ಅಗ್ಗದ ನಗರವಾಗಿದೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ. 
 
ಸ್ವಿಜರ್‌ಲೆಂಡ್ ಅತೀ ದೊಡ್ಡ ನಗರ ಜಿನೀವಾದಲ್ಲಿ ಬಿಯರ್ ಅತೀ ದುಬಾರಿಯಾಗಿದ್ದು, ಅಲ್ಲಿ 330 ಮಿಲಿ ಸೀಸೆಯ ಸರಾಸರಿ ದರ 6.32 ಡಾಲರ್. ಇಡೀ ಜಗತ್ತಿನಲ್ಲಿ ಅತೀ ದುಬಾರಿ ದರವಾಗಿದೆ.  ಅತ್ಯಧಿಕ ಸರಾಸರಿ ದರದಲ್ಲಿ ಜಿನೀವಾ ಅಗ್ರಸ್ಥಾನ ಗಳಿಸಿದ್ದು, 6.16 ಡಾಲರ್ ದರವಿರುವ ಹಾಂಕಾಂಗ್‌ ನಗರವನ್ನು ಹಿಂದಿಕ್ಕಿದೆ. ಜರ್ಮನ್ ಪ್ರವಾಸಿ ಶೋಧಕ ಎಂಜಿನ್ ಗೋಯೂರೋ ಈ ಸಮೀಕ್ಷೆಯನ್ನು ಪ್ರಕಟಿಸಿದೆ. 
 
ಎಲ್ ಅವೀವ್ 5.79 ಡಾಲರ್ ಸರಾಸರಿ ದರದೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಓಸ್ಲೋ 5.31 ಡಾಲರ್ ಮತ್ತು ನ್ಯೂಯಾರ್ಕ್‌ನಲ್ಲಿ 330 ಮಿಲೀ ಸೀಸೆಗೆ 5.20 ಡಾಲರ್ ದರವಿದೆ. 
 
ಭಾರತದ ರಾಜಧಾನಿ ದೆಹಲಿಗಿಂತ ಕೇವಲ ನಾಲ್ಕು ನಗರಗಳಲ್ಲಿ ಬಿಯರ್ ಅಗ್ಗದ ದರದಲ್ಲಿ ಸಿಗುತ್ತದೆ. ಪೊಲೆಂಡ್ ಕ್ರಕೋವ್‌ನಲ್ಲಿ ಅಗ್ಗದ ಬಿಯರ್ ಲಭ್ಯವಿದ್ದು, ಸರಾಸರಿ ದರ 1.66 ಡಾಲರ್. ಉಕ್ರೇನ್ ರಾಜಧಾನಿ ಕೀವ್‌ ಬ್ರಾಟಿಸ್ಲಾವಾದಲ್ಲಿ 1.69 ಡಾಲರ್ ಮತ್ತು ಮಲಾಗಾದಲ್ಲಿ 1.72 ಡಾಲರ್ ದರವಿದೆ.  
 
 

ವೆಬ್ದುನಿಯಾವನ್ನು ಓದಿ