ಪ್ರಧಾನಿ ಬಿಡುಗಡೆ ಮಾಡಿರುವ ’ಭೀಮ್’ ಆಪ್ ವಿಶೇಷಗಳು

ಶನಿವಾರ, 31 ಡಿಸೆಂಬರ್ 2016 (11:33 IST)
ದೇಶದ ಜನರು ಡಿಜಿಟಲ್ ವಹಿವಾಟಿಗೆ ಅನುಕೂಲವಾಗುವ ದೃಷ್ಟಿಯಿಂದ ಕೇಂದ್ರ ಸರಕಾರ ಭೀಮ್ - ಭಾರತ್ ಇಂಟರ್‌ಫೇಸ್ ಫರ್ ಮನಿ ಎಂಬ ಆಂಡ್ರಾಯ್ಡ್ ಆಪ್‌ನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇದನ್ನು ಬಿಡುಗಡೆ ಮಾಡಿದ್ದಾರೆ. 
 
ಶೀಘ್ರದಲ್ಲೇ ಐಓಎಸ್ ಆವೃತ್ತಿಯನ್ನೂ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಪಾವತಿ ಪಾಲಿಕೆ (ಎನ್‌ಪಿಸಿಐ) ರೂಪಿಸಿರುವ ಈ ಆಪ್ ಆಧಾರ್ ಸಂಖ್ಯೆ ಆಧಾರವಾಗಿ ಕೆಲಸ ಮಾಡುತ್ತೆ. ಯೂಪಿಐ, ಬ್ಯಾಂಕ್ ಖಾತೆಗಳನ್ನು ಇದಕ್ಕೆ ಸೇರಿಸಬಹುದು. ಕೇವಲ 2 ಎಂಬಿಗಿಂತಲೂ ಕಡಿಮೆ ಇರುವ ಆಪ್ ಇದು.
 
ಇದನ್ನು ಇನ್‍ಸ್ಟಾಲ್ ಮಾಡಿಕೊಳ್ಳುವುದು ತುಂಬಾ ಸುಲಭ. ಗೂಗಲ್ ಪ್ಲೇಸ್ಟೋರಿಗೆ ಹೋಗಿ ಬಿಎಚ್‌ಐಎಂ ಎನ್‌ಐಸಿಎಲ್ ಎಂದು ಟೈಪಿಸಿದರೆ ಭೀಮ್ ಆಪ್ ಸಿಗುತ್ತದೆ. ಅದನ್ನು ಡೌನ್‍ಲೋಡ್ ಮಾಡಿಕೊಂಡು ಇನ್‍ಸ್ಟಾರ್ ಮಾಡಿಕೊಂಡರಾಯಿತು. ಡೌನ್‍ಲೋಡ್ ಲಿಂಕ್ https://play.google.com/store/appsdetails?id=in.org.npci.upiapp 
 
ಡೌನ್‍ಲೋಡ್ ಆದ ಕೂಡಲೆ ನಿಮ್ಮ ಬ್ಯಾಂಕ್ ಖಾತೆ ಅಥವಾ ಯೂಪಿಐ ಪಿನ್‌ ಟೈಪಿಸಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ಬಳಕೆದಾರರ ಮೊಬೈಲ್ ನಂಬರ್, ವಿಳಾಸ ಇರುತ್ತದೆ. ಕೂಡಲೆ ಭೀಮ್ ಮೂಲಕ ವಹಿವಾಟನ್ನು ನಡೆಸಬಹುದು. ಯೂಪಿಐ ಮೂಲಕ ಅಷ್ಟೇ ಅಲ್ಲದೆ ಯೂಪಿಐ ಇಲ್ಲದ ಖಾತೆಗಳಿಗೂ ಹಣ ವರ್ಗಾಯಿಸಬಹುದು. 
 
ಎಂಎಂಐಡಿ, ಐಎಫ್‍ಎಸ್‍ಸಿ ಮೂಲಕವೂ ಇದು ಕೆಲಸ ಮಾಡುತ್ತದೆ. ಇತರರಿಂದ ನೀವು ಹಣ ಪಡೆಯಬಹುದು, ಸರಿಸುಮಾರು ಎಲ್ಲಾ ಖಾಸಗಿ, ಸರಕಾರಿ ಸ್ವಾಮ್ಯದ ಖಾತೆಗಳಿಗೆ ಹಣ ವರ್ಗಾಯಿಸಬಹುದು. ತುಂಬಾ ವೇಗವಾಗಿ ಕಾರ್ಯನಿರ್ವಹಿಸುವ ಈ ಆಪ್ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿದೆ. ಶೀಘ್ರದಲ್ಲೇ ಇತರೆ ಭಾರತೀಯ ಭಾಷೆಗಳಲ್ಲೂ ಬಿಡುಗಡೆ ಮಾಡಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ