ಕಪ್ಪು ಹಣ ಅಭಿಯಾನ: ಸ್ವಿಸ್ ಮತ್ತಿತರ ಬ್ಯಾಂಕ್‌ಗಳಿಂದ ಮಾಹಿತಿ ಹರಿವು

ಗುರುವಾರ, 28 ಮೇ 2015 (13:47 IST)
ಸ್ವಿಜರ್ಲೆಂಡ್ ಮಾತ್ರವಲ್ಲದೇ ಇನ್ನೂ ಅನೇಕ ರಾಷ್ಟ್ರಗಳು ತಮ್ಮ  ಬ್ಯಾಂಕ್‌ಗಳಲ್ಲಿ  ಕಪ್ಪು ಹಣ ಇಟ್ಟಿರುವ ಭಾರತೀಯರ ದತ್ತಾಂಶಗಳನ್ನು ಬಹಿರಂಗ ಪಡಿಸುವ ಇಚ್ಛೆ ವ್ಯಕ್ತಪಡಿಸಿವೆ. ಭಾರತೀಯರ ಹೆಸರು ಬಹಿರಂಗಪಡಿಸಲು ಈ ಹಿಂದೆ ಸರ್ಕಾರದ ಯತ್ನಕ್ಕೆ ಅಡ್ಡಿಮಾಡುತ್ತಿದ್ದ ಈ ರಾಷ್ಟ್ರಗಳು ಕೆಲವು ತಿಂಗಳಿಂದ ತೆರಿಗೆ ಇಲಾಖೆಯ ಸತತ ಪ್ರಯತ್ನದಿಂದ ಕಪ್ಪುಹಣದ ದತ್ತಾಂಶ ಬಯಲು ಮಾಡಲು ಮುಂದೆ ಬಂದಿವೆ. 
 
ಸತತ ಪ್ರಚಾರದ ಫಲವಾಗಿ ಮಾಹಿತಿ ಹರಿವು ಆರಂಭವಾಗಿದೆ. ಹೊಸ ಕಪ್ಪು ಹಣದ ಕಾನೂನು ಮತ್ತು ಬೇನಾಮಿ ಮಸೂದೆ ಸಕಾರಾತ್ಮಕವಾಗಿದೆ.  ಕಪ್ಪು ಹಣವನ್ನು ನಿಯಂತ್ರಿಸುವ ಭಾರತದ ಪ್ರಯತ್ನ ಬರೀ ಘೋಷಣೆಯಲ್ಲ, ಭಾರತ ಈ ಕುರಿತು ಗಂಭೀರವಾಗಿದೆ ಎಂದು ವಿದೇಶಿ ರಾಷ್ಟ್ರಗಳು ಗುರುತಿಸಿವೆ ಎಂದು ಮೂಲವೊಂದು ಹೇಳಿದೆ. 
 
ಎಚ್‌ಎಸ್‌ಬಿಸಿ ಪಟ್ಟಿಯನ್ನು ಮೀರಿ ಕಪ್ಪು ಹಣದ ಖಾತೆದಾರರ ಹೆಸರು ಬಯಲಾಗುತ್ತಿದ್ದು, ಅನೇಕ ಪ್ರಕರಣಗಳ ಬಗ್ಗೆ ಸ್ವತಂತ್ರ ತನಿಖೆ ನಡೆದಿದ್ದು, ಅವುಗಳ ಬಗ್ಗೆ ಮಾಹಿತಿ ತಿಳಿಯಲು ಸರ್ಕಾರ ಆಶಿಸಿದೆ.  ಸ್ವಿಸ್ ಫೆಡರಲ್ ಗೆಜೆಟ್‌ನಲ್ಲಿ ಪ್ರಕಟವಾದ ಕೆಲವು ಹೆಸರುಗಳ ಮೂಲಕ ಈಗಾಗಲೇ ಸಾಕ್ಷ್ಯಾಧಾರ ಸಿಕ್ಕಿದೆ. 
 
ವಿದೇಶದಲ್ಲಿನ ಕಪ್ಪು ಹಣವನ್ನು ಬಹಿರಂಗ ಮಾಡದೇ ಮುಚ್ಚಿಟ್ಟರೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಹೊಸ ಕಪ್ಪು ಹಣದ ಕಾನೂನಿನಿಂದ ಮತ್ತು ಮಾಹಿತಿ ಹಂಚಿಕೊಳ್ಳುವ ಒಪ್ಪಂದದಿಂದ ಅಕ್ರಮ ಸಂಪತ್ತು  ಹೊಂದಿರುವವರು ಮುಚ್ಚಿಟ್ಟರೆ ಅಕ್ರಮ ಸಂಪತ್ತನ್ನು ಮುಟ್ಟುಗೋಲು ಹಾಕಲಾಗುತ್ತದೆ. 

ವೆಬ್ದುನಿಯಾವನ್ನು ಓದಿ