ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣದ ಪ್ರಮಾಣದಲ್ಲಿ ಭಾರಿ ಇಳಿಕೆ

ಗುರುವಾರ, 30 ಜೂನ್ 2016 (19:47 IST)
ಭಾರತೀಯ ಕಪ್ಪು ಹಣ ಸರದಾರರು ಸ್ಪೀಸ್ ಬ್ಯಾಂಕ್‌ನಲ್ಲಿ ಇಟ್ಟಿರುವ ಕಪ್ಪು ಹಣದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಅಂಕಿಅಂಶದ ಪ್ರಕಾರ 8,392 ಕೋಟಿ ರೂಪಾಯಗಳಿಗೆ ಇಳಿಕೆ ಕಂಡಿದೆ ಎಂದು ತಿಳಿದು ಬಂದಿದೆ.
 
ಇತ್ತೀಚಿಗೆ ಬಿಡುಗಡೆಯಾಗಿರುವ ಸ್ವಿಟ್ಜರ್‌ಲ್ಯಾಂಡ್ ಸೆಂಟ್ರಲ್ ಬ್ಯಾಂಕಿಂಗ್ ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ, 2015 ರ ಸಾಲಿನ ಅಂತ್ಯದಲ್ಲಿ ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ಇಟ್ಟಿರುವ ಭಾರತೀಯರ ಹಣದ ಪ್ರಮಾಣ 1,217.6 ಮಿಲಿಯನ್‌ನಿಂದ 596.42 ಮಿಲಿಯನ್‌ಗೆ ಕುಸಿದಿದೆ ಎನ್ನುವ ಆಘಾತಕಾರಿ ಸುದ್ದಿ ಬಹಿರಂಗವಾಗಿದೆ.
 
2006 ರ ಸಾಲಿನಲ್ಲಿ ಭಾರತೀಯ ಕಪ್ಪು ಹಣ ಸರದಾರರು ಸ್ವಿಸ್ ಬ್ಯಾಂಕಿನಲ್ಲಿ ಒಟ್ಟು 23 ಸಾವಿರ ಕೋಟಿ ಹಣವನ್ನು ಠೇವಣಿ ಮಾಡಿದ್ದರು. 
 
2011 ಮತ್ತು 2013 ರ ಸಾಲಿನಲ್ಲಿ ಭಾರತೀಯ ಕಪ್ಪು ಹಣ ಸರದಾರರು ಸ್ವಿಸ್ ಬ್ಯಾಂಕಿನಲ್ಲಿ ಠೇವಣಿ ಮಾಡಿದ ಹಣದ ಪ್ರಮಾಣ ಕ್ರಮಾವಾಗಿ 12 ಮತ್ತು 42 ಪ್ರತಿಶತ ಹೆಚ್ಚಳವಾಗಿತ್ತು. 
 
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕಪ್ಪು ಹಣದ ಸರದಾರರ ಹೆಸರುಗಳನ್ನು ಬಹಿರಂಗಗೊಳಿಸುತ್ತದೆ ಎಂಬ ಆತಂಕದಿಂದ ಸ್ವಿಸ್ ಬ್ಯಾಂಕ್‌ನಲ್ಲಿರುವ ಭಾರತೀಯರ ಕಪ್ಪು ಹಣದ ಪ್ರಮಾಣದಲ್ಲಿ ಕುಸಿತ ಕಂಡಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ