ಅಕ್ಟೋಬರ್‌ನೊಳಗೆ ಕಪ್ಪು ಹಣದ ಪ್ರಗತಿ ವರದಿ : ಎಸ್‌ಐಟಿಗೆ ಸೂಚನೆ

ಗುರುವಾರ, 3 ಸೆಪ್ಟಂಬರ್ 2015 (20:12 IST)
ಸುಪ್ರೀಂಕೋರ್ಟ್ ಗುರುವಾರ ಕಪ್ಪು ಹಣ ವಾಪಸ್ ತರುವುದಕ್ಕೆ ಏನೇನು ಕ್ರಮ ಕೈಗೊಂಡಿದ್ದೀರಿ.  ಎಸ್‌ಐಟಿ ಮಾಡಿರುವ ಶಿಫಾರಸುಗಳ ಬಗ್ಗೆ ಏನೇನು ಮಾಡಿದ್ದೀರಿ ಸೂಚಿಸಿ ಎಂದು ಸುಪ್ರೀಂಕೋರ್ಟ್ ಕೇಂದ್ರಸರ್ಕಾರಕ್ಕೆ ಸೂಚನೆ ನೀಡಿದೆ.  ಅಕ್ಟೋಬರ್ 7ರೊಳಗೆ ಕಪ್ಪು ಹಣ ಕುರಿತಂತೆ ತನಿಖೆಯ ವರದಿಯನ್ನು ಸಲ್ಲಿಸಿ ಎಂದು ಸುಪ್ರೀಂಕೋರ್ಟ್ ಎಸ್‌ಐಟಿಗೆ ಸೂಚಿಸಿದೆ. 
 
ಎಸ್‌ಐಟಿ ಶಿಫಾರಸುಗಳ ಬಗ್ಗೆ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಅಟಾರ್ನಿ ಜನರಲ್ ಹೇಳುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಮತ್ತು ಇನ್ನಿಬ್ಬರು ನ್ಯಾಯಾಧೀಶರ ಪೀಠ ಅಕ್ಟೋಬರ್ 28ಕ್ಕೆ ವಿಚಾರಣೆ ಮುಂದೂಡುತ್ತಾ ತಿಳಿಸಿದರು. ತನಿಖೆಯ ತರುವಾಯದ ವರದಿಯು ಈ ತಿಂಗಳಾಂತ್ಯದಲ್ಲಿ ಮುಗಿದು ಅಕ್ಟೋಬರ್‌‌ನಲ್ಲಿ ಅದನ್ನು ಮಂಡಿಸಲು ಅನುಮತಿ ನೀಡಬೇಕೆಂದು ಹಿರಿಯ ವಕೀಲ ದುಷ್ಯಂತ್ ದವೆ ಪೀಠಕ್ಕೆ ಮಾಹಿತಿ ನೀಡಿದರು. 
 
ಕಳೆದ ಬಾರಿಯ ವಿಚಾರಣೆಯಲ್ಲಿ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ವಿದೇಶದಲ್ಲಿ ಪೇರಿಸಿರುವ ಕಪ್ಪು ಹಣವನ್ನು ವಾಪಸ್ ತರಲು ಎನ್‌ಡಿಎ ಸರ್ಕಾರ ಮತ್ತು ಹಿಂದಿನ ಯುಪಿಎ ಎರಡೂ ವಿಫಲವಾಗಿವೆ ಎಂದು ಆರೋಪಿಸಿದ್ದರು. 
 

ವೆಬ್ದುನಿಯಾವನ್ನು ಓದಿ