ಐಶಾರಾಮಿ ಕಾರು ತಯಾರಿಕಾ ಕಂಪನಿಗಳಲ್ಲಿ ಮೂರನೇ ಅತಿದೊಡ್ಡ ಸಂಸ್ಥೆ ಬಿಎಂಡಬ್ಲ್ಯು. ಮಿನಿ ವಿಭಾಗದಲ್ಲಿ ನಾಲ್ಕನೇ ಮಾಡೆಲ್ಲನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಐದು ಮಂದಿ ಕೂರಲು ಸೀಟಿಂಗ್ ವ್ಯವಸ್ಥೆ ಇರುವ ಈ ಕಾರಿನ ಬೆಲೆ ರು. 37.9 ಲಕ್ಷ. ಸದ್ಯಕ್ಕೆ ಮೂರು, ಐದು ಡೋರ್ ಇರುವ ಮಾಡೆಲ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.
ಎರಡು ಸಾವಿರ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯ ಇರುವ ಡೀಸೆಲ್ ವಾಹನಗಳ ಮೇಲೆ ಸುಪ್ರೀಂ ಕೋರ್ಟ್ ನಿಷೇಧ ಹೇರಿರುವುದರಿಂದ ಇನ್ನು ಮುಂದೆ ಪೆಟ್ರೋಲ್ ಕಾರುಗಳ ಮೇಲೆ ದೃಷ್ಟಿ ಕೇಂದ್ರೀಕರಿಸುವುದಾಗಿ ಬಿಎಂಡಬ್ಲ್ಯು ಇಂಡಿಯಾ ಪ್ರೆಸೆಡೆಂಟ್ ಫ್ರಾಂಕ್ ಸ್ಲೋಯಡರ್ ತಿಳಿಸಿದ್ದಾರೆ. ಮುಂಬರುವ ವರ್ಷ 12 ಕಾರುಗಳನ್ನು ಪೆಟ್ರೋಲ್ ಆವೃತ್ತಿಯಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ.