ಜಿಎಸ್‌ಟಿ ಜಾರಿಯ ಬಗ್ಗೆ ರಾಜ್ಯಗಳ ನಡುವೆ ಒಮ್ಮತ: ಜೇಟ್ಲಿ

ಗುರುವಾರ, 23 ಏಪ್ರಿಲ್ 2015 (18:11 IST)
ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಬಗ್ಗೆ ರಾಜ್ಯಗಳ ನಡುವೆ ವ್ಯಾಪಕ ಒಮ್ಮತ ಉಂಟಾಗಿರುವುದರಿಂದ ಸಂಸತ್ತಿನ ಪ್ರಸಕ್ತ ಅಧಿವೇನನದಲ್ಲಿ ಸಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ತಿಳಿಸಿದ್ದಾರೆ. 
 
ಜಿಎಸ್‌ಟಿಯನ್ನು ಜಾರಿಗೆ ತರುವ ಬಗ್ಗೆ ತಾವು ಆಶಾಭಾವನೆ ಹೊಂದಿರುವುದಾಗಿ ಜೇಟ್ಲಿ ಹೇಳಿದ್ದು, ರಾಷ್ಟ್ರವ್ಯಾಪಿ ಏಕೀಕೃತ ಮಾರುಕಟ್ಟೆಯನ್ನು ನಿರ್ಮಿಸುತ್ತದೆ ಮತ್ತು ವ್ಯಾಪಾರದ ಎಡರುತೊಡರುಗಳನ್ನು ನಿವಾರಿಸುತ್ತದೆ ಎಂದು ಹೇಳಿದರು. 
 
18 ರಾಜ್ಯಗಳ ವಿತ್ತಸಚಿವರನ್ನು ಜಿಎಸ್‌ಟಿ ನೀಲನಕ್ಷೆಯ ಕುರಿತು ಚರ್ಚಿಸಿದ ಬಳಿಕ ವರದಿಗಾರರ ಜೊತೆ ಜೇಟ್ಲಿ ಮಾತನಾಡುತ್ತಿದ್ದರು. ಮಸೂದೆಯನ್ನು ಜಾರಿಗೆ ತರುವ ಬಗ್ಗೆ ಒಂದೆರಡು ದಿನಗಳಲ್ಲಿ ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಲಾಗುತ್ತದೆ ಎಂದು ಅವರು ಹೇಳಿದರು. ಕಳೆದ ಡಿಸೆಂಬರ್‌ನಲ್ಲಿ ವಿಧೇಯಕವನ್ನು ಮಂಡಿಸಲಾಗಿತ್ತು.  ಜಿಎಸ್‌ಟಿಯನ್ನು ನಿಗದಿತ ದಿನಾಂಕದಲ್ಲಿ ಜಾರಿಗೆ ತರಲು ಎಲ್ಲಾ ರಾಜ್ಯಗಳ ಕಳವಳಗಳನ್ನು ಬಗೆಹರಿಸಲು ಕೇಂದ್ರ ಕಾರ್ಯಪ್ರವೃತ್ತವಾಗಿದೆ. 
 
ಕೇಂದ್ರ ಮತ್ತು ರಾಜ್ಯಗಳು ಕಂದಾಯ ತಾಟಸ್ಥ್ಯ ದರದ ಬಗ್ಗೆ ಕಾರ್ಯಪ್ರವೃತ್ತವಾಗಿದೆ. ಪ್ರಸಕ್ತ ಈ ದರವು ಶೇ. 27ರಷ್ಟಿದೆ. ಜಿಎಸ್‌ಟಿ ಜಾರಿ ನಂತರ ಈ ದರದಿಂದ ರಾಜ್ಯಗಳಿಗೆ ಕಂದಾಯ ನಷ್ಟವಾಗುವುದಿಲ್ಲ. 
 

ವೆಬ್ದುನಿಯಾವನ್ನು ಓದಿ