ಬಿಎಸ್ಎನ್‍ಎಲ್‍ನಿಂದ ಉಚಿತ ಸಿಮ್ ಆಫರ್

ಶನಿವಾರ, 18 ಫೆಬ್ರವರಿ 2017 (20:59 IST)
ಅಮೂಲ್ಯ ಯೋಜನೆಯಡಿ ಹೊಸ ಗ್ರಾಹಕರು ಮತ್ತು ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಂಎನ್‌ಪಿ) ಬಳಕೆದಾರರಿಗೆ ಉಚಿತ ಸಿಮ್ ಆಫರ್ ನೀಡುತ್ತಿರುವುದಾಗಿ ಭಾರತ ಸಂಚಾರ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಪ್ರಕಟಿಸಿದೆ. ಈ ಪ್ಲಾನ್ ವೋಚರ್ ಬೆಲೆ ರೂ.51.
 
ಈ ಪ್ಲಾನಡಿಯಲ್ಲಿ ವಾಯ್ಸ್ ಕಾಲ್ಸ್ ಪ್ರತಿ ಸೆಕೆಂಡಿಗೆ 1 ಪೈಸೆ, ರಾತ್ರಿ ವೇಳೆಯಲ್ಲಿ (ರಾತ್ರಿ 9 ಗಂಟೆಯಿಂದ ಬೆಳಗ್ಗೆ 7ರವರೆಗೆ) ಯಾವುದೇ ನೆಟ್‍ವರ್ಕ್ ಲೋಕಲ್/ಎಸ್‌ಟಿಡಿ ಕರೆಗಳಿಗೆ ನಿಮಿಷಕ್ಕೆ 25 ಪೈಸೆ ಶುಲ್ಕ ವಿಧಿಸುತ್ತಿರುವುದಾಗಿ ಕಂಪೆನಿ ತಿಳಿಸಿದೆ. 
 
ಅದೇ ರೀತಿ ಮೂರು ತಿಂಗಳ ಕಾಲ ಪ್ರತಿ 1200 ಸೆಕೆಂಡುಗಳಿಗೆ ಉಚಿತ ಕರೆಗಳು, 30 ದಿನಗಳಿಗೆ 300 ಎಂಬಿ ಉಚಿತ ಡಾಟಾ, ಎರಡು ತಿಂಗಳವರೆಗೆ 50 ಎಂಬಿ ಡಾಟಾ ಅಮೂಲ್ಯಾ ಪ್ಲಾನ್‌ನಡಿ ಕೊಡುತ್ತಿರುವುದಾಗಿ ತಿಳಿಸಿದೆ. ಈ ಆಫರ್ ಗ್ರಾಹಕ ಸೇವಾ ಕೇಂದ್ರಗಳು, ಬಿಎಸ್ಎನ್ಎಲ್ ಫ್ರಾಂಚೈಸಿಗಳು, ರೀಟೈಲ್ ಔಟ್‌ಲೆಟ್‌ಗಳ ಬಳಿ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ