ಈ ಸಲದ ಬಜೆಟ್‌‌‌ನಲ್ಲಿ ಏನೇನಿರಲಿದೆ ಗೊತ್ತಾ?

Arunkumar

ಗುರುವಾರ, 3 ಜುಲೈ 2014 (15:57 IST)
ಈ ವಾರದಲ್ಲಿ ನರೇಂದ್ರ ಮೋದಿ ಸರ್ಕಾರ ಮೊದಲ ಬಜೆಟ್‌‌ ಮಂಡನೆ ಮಾಡಲಿದೆ. 2013 ರಲ್ಲಿ ಯೂಪಿಎ ಸರ್ಕಾರ ಬಜೆಟ್‌ ಮಂಡನೆ ಮಾಡಿತ್ತು ಆಗ ಗುಜರಾತ್‌ ಸಿಎಮ್‌ ನರೇಂದ್ರ ಮೋದಿ ಈ ಬಜೆಟ್‌ ಕುರಿತು ಟೀಕೆ ಮಾಡಿದ್ದರು. ಆ ಟೀಕೆ ನೋಡಿದರೆ ಈ ವರ್ಷದ ಬಜೆಟ್‌‌‌ನಲ್ಲಿ ಏನೇನಿರಲಿದೆ ಎಂದು ಆರ್ಥಿಕ ತಜ್ಞರ ಅಭಿಪ್ರಾಯಗಳು ಈ ಕೆಳಗಿನಂತಿವೆ ಓದಿ. 
 
ಕಳೆದ ವರ್ಷದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಬಜೆಟ್ ಮಂಡಿಸಿದ್ದಾಗ, ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಟು ಟೀಕೆಗೆ ಗುರಿಯಾಗಿಸಿದ್ದರು.ಅಂದು ವಿರೋಧಿ ಪಕ್ಷದ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಟೀಕಿಸಿದ ಪರಿಯನ್ನು ನೋಡಿದಲ್ಲಿ ಈ ಬಾರಿ ಯಾವ ರೀತಿಯ ಬಜೆಟ್ ಮಂಡಿಸಬಹುದು ಎನ್ನುವ ಸುಳಿವು ಲಭ್ಯವಾಗಿದೆ.  
 
1.ಬಜೆಟ್‌ನಲ್ಲಿ ಸಮತೋಲನವಿರುವುದಿಲ್ಲ 
2013ರಲ್ಲಿ ನರೇಂದ್ರ ಮೋದಿ ಯುಪಿಎ ಸರ್ಕಾರದ ಬಜೆಟ್‌‌‌‌ಗೆ ಟೀಕೆ ಮಾಡಿದ್ದರು. ಈ ಬಜೆಟ್‌ ಬೇರೆ ತರಹನೇ ಇದೆ. ಯುಪಿಎ ಸರ್ಕಾರ ಸುರಕ್ಷತೆಯ ಆಟ ಆಡಲು ಬಯಸುತ್ತಿದೆ ಎಂದು ಟೀಕೆ ಮಾಡಿದ್ದರು. ಯುಪಿಎ ದೊಡ್ಡ ಸಾಧನೆ ಏನು ಮಾಡುತ್ತಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು. ಈ ಮೂಲಕ ಮೋದಿ ಸರ್ಕಾರ ಹೊಸ ರೀತಿಯ ಬಜೆಟ್‌‌ನಲ್ಲಿ ದೊಡ್ಡ ಸಾಧನೆ ತೋರುವ ಸಾಧ್ಯತೆಗಳಿವೆ. 
 
2. ಮೂಲ ಸೌಕರ್ಯ ಅಭಿವೃದ್ಧಿಗಾಗಿ ಹೂಡಿಕೆದಾರರಿಗೆ ಆಕರ್ಷಣೆ 
" ಮೂಲ ಸೌಕರ್ಯ ಅಭಿವೃದ್ದಿಗಾಗಿ 55 ಲಕ್ಷ ಕೋಟಿ ರೂಪಾಯಿ ಅವಶ್ಯಕತೆ ಇದೆ. ಆದರೆ ಸರ್ಕಾರ ಬಜೆಟ್‌‌ನಲ್ಲಿ ಕೇವಲ 50 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಿದೆ" ಎಂದು ಕಳೆದ ವರ್ಷ ಯುಪಿಎ ಬಜೆಟ್‌‌‌ಗೆ ಮೋದಿ ಟೀಕೆ ಮಾಡಿದ್ದರು. ಇದಕ್ಕಾಗಿ ದೊಡ್ಡ ಪ್ರಾಜೆಕ್ಟ್‌‌ಗಳಿಗಾಗಿ ಆರ್ಥಿಕ ನೆರವು ಕೊರತೆಯಾಗಲಿದೆ ಎಂದು ಮೋದಿ ತಿಳಿಸಿದ್ದರು. ಈಗ ಮೋದಿ ಸರ್ಕಾರ ದೊಡ್ಡ ಯೋಜನೆಗಳ ಜಾರಿಗೆ ಚಿಂತನೆ ನಡೆಸಿದಲ್ಲಿ ಆರ್ಥಿಕ ಸಂಗ್ರಹಕ್ಕಾಗಿ ತಂತ್ರ ರೂಪಿಸುವ ಸಾಧ್ಯತೆಗಳಿವೆ.
  
3. ಸ್ಕಿಲ್‌ ಡೆವಲಪ್‌ಮೆಂಟ್‌‌‌ 
ಯುಪಿಎ ಸರ್ಕಾರ ಸ್ಕಿಲ್ ಡೆವಲಪ್‌‌ಮೆಂಟಗಾಗಿ ಕೇವಲ 1000 ಕೋಟಿ ರೂಪಾಯಿ ನಿಗದಿ ಪಡೆಸಿದೆ. ಗುಜರಾತ ಸರ್ಕಾರ ಈ ಕೆಲಸಕ್ಕಾಗಿ 800 ಕೋಟಿ ರೂಪಾಯಿ ನೀಡಿದೆ ಎಂದು ಮೋದಿ ಟೀಕೆ ಮಾಡಿದ್ದರು. ಅಮೆರಿಕಾದಂತಹ ದೇಶಗಳಲ್ಲಿ ಸ್ಕಿಲ್‌ ಡೆವಲಪ್‌‌ಮೆಂಟ್‌ಗಾಗಿ ಹೆಚ್ಚು ಹೆಚ್ಚು ಹಣ ಖರ್ಚು ಮಾಡುತ್ತಾರೆ ಎಂದು ಮೋದಿ ತಿಳಿಸಿದರು. ಈ ಮೂಲಕ ಮೋದಿ ಬಯಸಿದರೆ ಸ್ಕಿಲ್ ಡೆವಲಪ್‌ಮೆಂಟ್‌ಗಾಗಿ ಪ್ರಯತ್ನ ಪಡಲಿದ್ದಾರೆ. ಈ ವಿಷಯ ಇವರ ಚುನಾವಣಾ ಭಾಷಣದಲ್ಲಿ ಕೂಡ ಪ್ರಸ್ತಾಪಿಸಿದ್ದರು. 
  
.........ಇನ್ನು ಇದೆ. ಮುಂದೆ ಓದಿ. 
 
 

4. ಸರ್ಕಾರದ ಬೊಕ್ಕಸ ಹೆಚ್ಚುಸುವಡೆಗೆ ಲಕ್ಷವಹಿಸಲಿದ್ದಾರೆ. 
ಕಳೆದ ಬಾರಿಯ ಬಜೆಟ್‌ ಸಮುಯದಲ್ಲಿ ಸರ್ಕಾರ ರೆವಿನ್ಯೂ ಮತ್ತು ಟ್ಯಾಕ್ಸ್‌‌ ಹೆಚ್ಚುಸುವ ಚಿಂತನೆ ಮಾಡಿಲ್ಲ ಎಂದು ಮೋದಿ ತಿಳಿಸಿದ್ದರು. ಕಳೆದ ಬಜೆಟ್‌‌ ಸಮಯದಲ್ಲಿ ಕೆಲವು ಎಕ್ಸಪರ್ಟ್ಸ್‌‌ಗಳು ಕೂಡ ಇದನ್ನೆ ತಿಳಿಸಿದ್ದರು. ಈ ಮೂಲಕ ಈ ಸಲ ಮೋದಿ ರೆವಿನ್ಯೂ ಹೆಚ್ಚಿಸುವ ಮತ್ತು ಟ್ಯಾಕ್ಸ್‌‌ನಲ್ಲಿ ಸುಧಾರಣೆ ತರುವ ಸಾಧ್ಯತೆಗಳಿವೆ. 
 
5 ರಾಜ್ಯಗಳಿಗೆ ಸಿಗಲಿದೆ ಸ್ವತಂತ್ರ 
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ವಿಶ್ವಾಸದ ಕೊರತೆ ಇದೆ ಎಂದು 2013ರ ಬಜೆಟ್‌ ಸಮಯದಲ್ಲಿ ತಿಳಿಸಿದ್ದರು. ಕೆಲವು ಪ್ರಧಾನ ಮಂತ್ರಿ ಮತ್ತು ವಿತ್ತ ಮಂತ್ರಿ ಬಜೆಟ್‌‌‌‌ನಲ್ಲಿ ದೇಶದ ಒಕ್ಕೂಟ ರಚೆನೆಯಡೆಗೆ ಲಕ್ಷ ವಹಿಸುವುದಿಲ್ಲ ಎಂದು ಮೋದಿ ಆರೋಪಿಸಿದ್ದರು. ಈ ಬಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ವಿಶ್ವಾಸದ ಕೊರತೆ ನೀಗಿಸುವ ಪ್ರಯತ್ನಕ್ಕೆ ಕೈಹಾಕಲಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದ ಮೋದಿ ರಾಜ್ಯಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುವ ಸಾಧ್ಯತೆಗಳಿವೆ.

ವೆಬ್ದುನಿಯಾವನ್ನು ಓದಿ