ಚಿನ್ನಾಭರಣ ಮೇಲಿನ ಅಬಕಾರಿ ತೆರಿಗೆ: 14ನೇ ದಿನಕ್ಕೆ ಕಾಲಿಟ್ಟ ವರ್ತಕರ ಪ್ರತಿಭಟನೆ

ಗುರುವಾರ, 17 ಮಾರ್ಚ್ 2016 (19:15 IST)
ನವದೆಹಲಿ: ಬೆಳ್ಳಿಯೇತರ ಒಡವೆ ವಸ್ತುಗಳ ಮೇಲೆ ಶೇ.1ರಷ್ಟು ಅಬಕಾರಿ ಸುಂಕ ಹೇರಿರುವುದನ್ನು ಹಿಂತೆಗೆಯುವಂತೆ ನೀಡಿದ ಪ್ರಸ್ತಾವಣೆಯನ್ನು ಅರುಣ ಜೇಟ್ಲಿ ತೀರಸ್ಕರಿಸಿದ್ದರ ಹಿನ್ನೆಲೆಯಲ್ಲಿ ಚಿನ್ನಾಭರಣ ವರ್ತಕರು ನಡೆಸುತ್ತಿರುವ ಮುಷ್ಕರ ಹದಿನಾಲ್ಕನೆ ದಿನಕ್ಕೆ ಪ್ರವೇಶಿಸಿದೆ.
ಬೆಳ್ಳಿಯೇತರ ಒಡವೆ ವಸ್ತುಗಳ ಮೇಲೆ ಅಬಕಾರಿ ಸುಂಕ ಹೇರಿರುವುದು ಮತ್ತು ಎರಡು ಲಕ್ಷ ರೂಪಾಯಿ ಮೀರಿದ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಪಾನ್‌ ಕಾರ್ಡನ್ನು ಕಡ್ಡಾಯಗೊಳಿಸಿರುವ ಸರಕಾರದ ಕ್ರಮವನ್ನು ವಿರೋಧಿಸಿ ಚಿನ್ನಾಭರಣ ವರ್ತಕರು ದೇಶಾದ್ಯಂತ ಬಂದ್‌ ಮುಷ್ಕರ ನಡೆಸುತ್ತಿದ್ದಾರೆ.
 
ಬೆಳ್ಳಿಯೇತರ ಒಡವೆ ವಸ್ತುಗಳ ಮೇಲೆ ಶೇ.1ರಷ್ಟು ಅಬಕಾರಿ ಸುಂಕ ಹೇರಿರುವುದನ್ನು ಹಿಂತೆಗೆದುಕೊಳ್ಳುವಂತೆ ಸಲ್ಲಿಸಿದ್ದ ಪ್ರಸ್ತಾವಣೆಯನ್ನು ಸೋಮವಾರ ಲೋಕಸಭೆಯಲ್ಲಿ ಅರುಣ ಜೇಟ್ಲಿ ತಿರಸ್ಕರಿಸಿದ್ದರು.  
 
ಎರಡು ಲಕ್ಷ ರೂಪಾಯಿ ಮೀರಿದ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಪಾನ್‌ ಕಾರ್ಡನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರಕಾರದ ಕ್ರಮದಿಂದ, ಚಿನ್ನಾಭರಣ ಉದ್ಯಮ ಗಣನೀಯವಾಗಿ 20 ಪ್ರತಿಶತದಷ್ಟು ಕುಸಿತ ಕಂಡಿದೆ ಎಂದು ಆಲ್ ಇಂಡಿಯಾ ಸರಫ್ ಅಸೋಸಿಯೇಷನ್ ಉಪಾಧ್ಯಕ್ಷ ಸುರೇಂದರ್ ಕುಮಾರ್ ಜೈನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ