2015ರಲ್ಲಿ ಇಂಟರ್ನೆಟ್ ಬಳಕೆದಾರರಿಗೆ ಭರವಸೆ ಮೂಡಿಸುವ 4ಜಿ ವೇಗ

ಬುಧವಾರ, 17 ಡಿಸೆಂಬರ್ 2014 (13:43 IST)
ಭಾರತದಲ್ಲಿ ಮನೆ ಬಳಕೆದಾರರಿಗೆ ಸಿಗುತ್ತಿರುವ ಅಂತರ್ಜಾಲದ ವೇಗ ಈಗಲೂ ಮುಜುಗರ ಪಡುವಂತ ಸ್ಥಿತಿಯಲ್ಲಿದೆ. ಇಂಟರ್ನೆಟ್ ವೇಗಗಳಿಗೆ ಜನಪ್ರಿಯ ಸ್ಪೀಡ್‌ಟೆಸ್ಟ್ ಟೆಸ್ಟಿಂಗ್ ವೇದಿಕೆಯಾದ ಓಕ್ಲಾ ಭಾರತವನ್ನು  ಹೌಸ್‌ಹೋಲ್ಡ್ ಡೌನ್‌ಲೋಡ್ ಸೂಚ್ಯಂಕದಲ್ಲಿ 136ನೇ ಸ್ಥಾನದಲ್ಲಿರಿಸಿದೆ (194 ರಾಷ್ಟ್ರಗಳ ಪೈಕಿ).ಇದು ಮನೆಗಳಲ್ಲಿ ಅಳೆಯುವ ಸರಾಸರಿ ಡೌನ್‌ಲೋಡ್ ವೇಗವಾಗಿದೆ.  

ಜಾಗತಿಕ ಸರಾಸರಿ 21.5 ಎಂಬಿಪಿಎಸ್ ಇದ್ದು, ಅದಕ್ಕೆ ಹೋಲಿಸಿದರೆ ದೇಶದಲ್ಲಿ ಇಂಟರ್‌ರ್ನೆಡ್ ಡೌನ್‌ಲೋಡ್ ವೇಗ  6 ಎಂಬಿಪಿಎಸ್‌‌ನಲ್ಲಿದೆ. ದೇಶದಲ್ಲಿ ಮೊಬೈಲ್ ತಂತ್ರಜ್ಞಾನದ ಸ್ಫೋಟದಿಂದ ಮೊಬೈಲ್ ಕ್ಷೇತ್ರದಲ್ಲಾದರೂ ಭಾರತ ಮುಂದಿರಬಹುದೆಂದು ನಿರೀಕ್ಷಿಸಬಹುದು. ಆದರೆ ಮೊಬೈಲ್ ಡೌನ್‌ಲೋಡ್ ಸೂಚ್ಯಂಕದಲ್ಲಿ  ಭಾರತ 114 ರಾಷ್ಟ್ರಗಳ ಪೈಕಿ 101ನೇ ಸ್ಥಾನದಲ್ಲಿದೆ.

 ಜಾಗತಿಕ ಸರಾಸರಿ ಡೌನ್‌ಲೋಡ್ ಸ್ಪೀಡ್ 10.9 ಎಂಬಿಪಿಎಸ್‌ಗಳಾಗಿದ್ದರೆ ಭಾರತದಲ್ಲಿ ಅದರ ವೇಗ ಕೇವಲ 2.7 ಎಂಬಿಪಿಎಸ್. ಆದರೆ 2015ರಲ್ಲಿ ಒಂದು ಆಶಾದಾಯಕ ಬೆಳವಣಿಗೆಯೆಂದರೆ ಕೆಲವು ಆಯ್ದ ನಗರಗಳಲ್ಲಿ 4ಜಿ ಅಥವಾ ನಾಲ್ಕನೇ ತಲೆಮಾರಿನ ಮೊಬೈಲ್ ಸಂಪರ್ಕ ಬಿಡುಗಡೆಯಾಗಿರುವುದು. 4ಜಿ 100 ಎಂಬಿಪಿಎಸ್ ಡೌನ್‌ಲೋಡ್ ವೇಗದ ಭರವಸೆ ನೀಡಿದೆ.

ಇದಕ್ಕೆ ಹೋಲಿಸಿದರೆ 3ಜಿ ವೇಗ 21 ಎಂಬಿಪಿಎಸ್.  ಇಂತಹ ವೇಗದಿಂದ ಗ್ರಾಹಕರಿಗೆ ಸಿಗುವ ಅನುಕೂಲವೆಂದರೆ, 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 10 ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಬಹುದು ಅಥವಾ ವಿಡಿಯೋ ಟ್ಯೂಬ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲದೇ ವಿಡಿಯೋಗಳನ್ನು ವೀಕ್ಷಿಸಬಹುದು. 

ವೆಬ್ದುನಿಯಾವನ್ನು ಓದಿ