ರಾಜಸ್ಥಾನದ ಮರಭೂಮಿಯಲ್ಲಿ ಭಾರಿ ತೈಲ ನಿಕ್ಷೇಪ ಪತ್ತೆ

ಶುಕ್ರವಾರ, 25 ಜುಲೈ 2014 (18:46 IST)
ತೈಲ ಮತ್ತು ನೈಸರ್ಗಿಕ ಗ್ಯಾಸ್‌‌ ಸಂಶೋಧನಾ ಕ್ಷೇತ್ರದ ಪ್ರಮುಖ ಕಂಪೆನಿ ಕೆಯರ್ನ್ ಇಂಡಿಯಾ, ರಾಜಸ್ಥಾನದ ಧಾರ್ ಮರಭೂಮಿಯಲ್ಲಿ 4.6 ಅರಬ್‌ ಬ್ಯಾರೆಲ್‌ ತೈಲ ಮತ್ತು ಅನಿಲದ ಹೊಸ ಸಂಗ್ರಹವಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಇದೀಗ ಏಳು ಅರಬ್‌ ಬ್ಯಾರೆಲ್‌ ದೊರೆಯಬಹುದು ಎನ್ನುವ ವಿಶ್ವಾಸ ವ್ಯಕ್ತಪಡಿಸಿದೆ. 
 
ಭಾರತ ಮತ್ತು ಚೀನಾ ವಿಶ್ವದ ಎಲ್ಲಕ್ಕಿಂತ ದೊಡ್ಡ ತೈಲ ಆಮದು ಮಾಡಿಕೊಳ್ಳುವ ದೇಶವಾಗಿವೆ. ಆದರೆ ಅಮೆರಿಕಾ ಆಮದು ಮಾಡಿಕೊಂಡ ತೈಲದ ಮೇಲೆ ತನ್ನ ಅವಲಂಬನೆ ಕಡಿಮೆ ಮಾಡುತ್ತಿದೆ ಎಂದು ಕಂಪೆನಿಯ ಅಧ್ಯಕ್ಷ ನವೀನ್ ಅಗರವಾಲ್‌ ವಾರ್ಷಿಕ ಸಭೆಯಲ್ಲಿ ತಿಳಿಸಿದ್ದಾರೆ. 
 
ಸರ್ಕಾರದ ಸರಳ ನೀತಿ , ತೆರಿಗೆ ಮತ್ತು ವಿತ್ತೀಯ ನಿಬಂಧನೆಗಳಲ್ಲಿ ಸ್ಪಷ್ಟತೆ ತಂದು ದೇಶಿಯವಾಗಿ ತೈಲ ಉತ್ಪಾದನೆಗೆ ಉತ್ತೇಜನ ನೀಡಿದಲ್ಲಿ ದೇಶದ ತೈಲ ಆಮದಿನ ಮೇಲಿನ ಅವಲಂಬನೆ ಕಡಿಮೆ ಆಗುವುದು ಎಂದು ಹೇಳಿದ್ದಾರೆ. 
 
ದೇಶಿಯವಾಗಿ ತೈಲ ಉತ್ಪಾದಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಲಾಭವಾಗುವದರ ಜತೆಗೆ ತೈಲ ಆಯಾತಕ್ಕಾಗಿ ಮಾಡುವ ವೆಚ್ಚವನ್ನು ತಗ್ಗಿಸಬಹುದು ಎಂದು ತಿಳಿಸಿದ್ದಾರೆ. 
 
ಕಂಪೆನಿಯ ತೈಲ ಉತ್ಪಾದನೆಯಿಂದ ಕೇಂದ್ರ ಸರಕಾರಕ್ಕೆಕಳೆದ ವರ್ಷ ಆಯಾತದಿಂದ ಆಗುವ ವೆಚ್ಚದಲ್ಲಿ 48 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿತ್ತು. 
 
ಪ್ರಸಕ್ತ ವಿತ್ತ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ರಾಜಸ್ಥಾನದಿಂದ ಪ್ರತಿ ದಿನ 4.80 ಕೋಟಿ ಘನ ಅಡಿ ಗ್ಯಾಸ್‌ ಉತ್ಪಾದನೆ ಮಾಡಲಾಗಿದೆ. ವರ್ಷಾಂತ್ಯದವರೆಗೆ ಇದು ಎರಡರಷ್ಟಾಗುವ ಸಾಧ್ಯತೆಗಳಿವೆ ಎಂದು ಕೆಯರ್ನ್ ಇಂಡಿಯಾ,  ಅಧ್ಯಕ್ಷ ನವೀನ್ ಅಗರ್‌ವಾಲ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ