ಕ್ಯಾಂಪಸ್ ನೇಮಕಾತಿಯಲ್ಲಿ 20,000 ವಿದ್ಯಾರ್ಥಿಗಳ ಆಯ್ಕೆ

ಮಂಗಳವಾರ, 13 ಅಕ್ಟೋಬರ್ 2015 (20:19 IST)
ಕ್ಯಾಂಪಸ್ ನೇಮಕಾತಿ ಮೂಲಕ ಈ ವರ್ಷ 20,000 ವಿದ್ಯಾರ್ಥಿಗಳನ್ನು ನೌಕರಿಗೆ ನೇಮಿಸಿಕೊಳ್ಳುವುದಾಗಿ ಇನ್ಫೋಸಿಸ್ ತಿಳಿಸಿದ್ದು, ಅವರಿಗೆ ಕಳೆದ ವರ್ಷ ನೀಡಿದಂತೆ ತಲಾ 3.25 ಲಕ್ಷ ರೂ. ವಾರ್ಷಿಕ ವೇತನ ನೀಡುವುದಾಗಿ ತಿಳಿಸಿದೆ. 
 
ಭಾರತದ ಎರಡನೇ ಅತೀ ದೊಡ್ಡ ಐಟಿ ಕಂಪನಿ ಕಳೆದ ವರ್ಷದಂತೆ ಈ ವರ್ಷವೂ ಅಷ್ಟೇ ಸಂಖ್ಯೆಯ ಇಂಟರ್ನ್‌ಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಆದರೆ ಸ್ಟೈಪೆಂಡ್ ಹಣವನ್ನು 4000 ರೂ.ಗಳಿಂದ 10,000 ರೂ.ಗಳಿಗೆ ಹೆಚ್ಚಿಸುತ್ತದೆ ಎಂದು ತಿಳಿಸಿದೆ.
 
 ಹೊಸ ಉದ್ಯೋಗಿಗಳಿಗೆ ಐದರಿಂದ ಆರು ತಿಂಗಳ ತರಬೇತಿ ನೀಡುತ್ತದೆ ಮತ್ತು ಕೋರ್ಸ್ ಸ್ವರೂಪ, ಪಠ್ಯಕ್ರಮ, ತರಬೇತಿ ವಿಧಾನದಲ್ಲಿ ಗಮನಾರ್ಹ ಬದಲಾವಣೆಯಿಂದ ತೇರ್ಗಡೆ ದರಗಳಲ್ಲಿ ಗಮನಾರ್ಹ ಸುಧಾರಣೆಯಾಗಿದೆ ಎಂದು ಇನ್ಫೋಸಿಸ್ ತಿಳಿಸಿದೆ. 
 
 ನೌಕರರ ಕೆಲಸ ತ್ಯಜಿಸುವಿಕೆ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ನಿಯಂತ್ರಣಕ್ಕೆ ಬಂದಿರುವಂತೆ ಕಾಣುತ್ತದೆ. ಇದು ದೊಡ್ಡ ವಿಷಯವಾಗಿ ಉಳಿದಿಲ್ಲ ಎಂದು  ಮುಖ್ಯನಿರ್ವಹಣಾ ಅಧಿಕಾರಿ ಪ್ರವೀಣ್ ರಾವ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ