ಫೇಸ್‌ಬುಕ್ ಹೊಸ ಮಾಧ್ಯಮ ಶಾಲೆಯಾಗಬಹುದೇ?

ಮಂಗಳವಾರ, 30 ಜೂನ್ 2015 (18:47 IST)
ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲ ತಾಣಗಳು  ತರಗತಿಗಳಲ್ಲಿ ಬಿಟ್ಟು ಹೋದ ವೈಜ್ಞಾನಿಕ ಶಿಕ್ಷಣ ಮತ್ತು ಇತರೆ ಜಟಿಲ ವಿಷಯಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ನೆರವಾಗುತ್ತದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.
 
ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳು ಫೇಸ್‌ಬುಕ್ ವೇದಿಕೆಯಲ್ಲಿ ವೈಜ್ಞಾನಿಕ ವಿಷಯಗಳ ಬಗ್ಗೆ ಹುರುಪಿನ, ಚುರುಕಾದ ಚರ್ಚೆಯಲ್ಲಿ ನಿರತರಾದರೆ ಸಾಮಾನ್ಯ ಮಕ್ಕಳಿಗಿಂತ ಉತ್ತಮವಾಗಿ ಕಲಿಯಲು ನೆರವಾಗುತ್ತದೆ ಎಂದು ಮಿಚಿಗನ್ ಸ್ಟೇಟ್ ವಿವಿಯ ಸಂಶೋಧಕರು ಅಧ್ಯಯನದ ಮೂಲಕ ಪತ್ತೆಹಚ್ಚಿದ್ದಾರೆ. 
 
ಇಂತಹ ರೀತಿಯ ಸಮುದಾಯ ಚರ್ಚೆಗಳಲ್ಲಿ ತಮ್ಮ ಔಪಚಾರಿಕ ಪಠ್ಯಕ್ರಮಗಳ ಜೊತೆಗೆ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಶ್ರೀಮಂತ ಪರಿಸರವನ್ನು ಒದಗಿಸುತ್ತದೆ.  ಜನಪ್ರಿಯ ಆನ್‌ಲೈನ್ ಸೈಟ್‌ಗಳಾದ ಫೇಸ್ ಬುಕ್ ಇದಕ್ಕೆ ಸಂಭವನೀಯ ಕಲಿಕಾ ತಾಣವನ್ನಾಗಿಸಿದೆ. ಫೇಸ್‌ಬುಕ್‌ನಲ್ಲಿ ಶತಕೋಟಿಗೂ ಹೆಚ್ಚು ಬಳಕೆದಾರರಿದ್ದು, ಅತೀ ಹೆಚ್ಚು ಫೇಸ್ ಬುಕ್ ಬಳಕೆಯಿಂದ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಗಮನ ಬೇರೆ ಕಡೆ ಸೆಳೆಯುತ್ತದೆ, ಒಂಟಿತನವನ್ನು ಸೃಷ್ಟಿಸುತ್ತದೆ ಮತ್ತು ಸೈಬರ್ ಕಿರುಕುಳಕ್ಕೆ ನಾಂದಿಯಾಗುತ್ತದೆ ಎಂದು ಟೀಕೆ ಮಾಡಲಾಗುತ್ತಿದೆ. 
 
ಯಾವುದೇ ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಬಹುದು. ಆದರೆ ಈ ತಾಣಗಳನ್ನು ಕಲಿಕೆಯ ವೇದಿಕೆಗಳಾಗಿ, ಆರೋಗ್ಯಕರ ಶೈಕ್ಷಣಿಕ ಚರ್ಚೆಗೆ ಮತ್ತು ವೃತ್ತಿಜೀವನದ ಅಭಿವೃದ್ಧಿಗೆ ಬಳಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಈ ಅಧ್ಯಯನವನ್ನು ಮಾನವ ನಡವಳಿಕೆಯ ಜರ್ನಲ್ ಕಂಪ್ಯೂಟರ್ಸ್‌ನಲ್ಲಿ ಪ್ರಕಟಿಸಲಾಗಿದೆ. 

 

ವೆಬ್ದುನಿಯಾವನ್ನು ಓದಿ