ಸರಕು ಸಾಗಣೆ ದರ ಏರಿಕೆ: ಸಿಮೆಂಟ್ ದರ ಪ್ರತಿ ಚೀಲಕ್ಕೆ 5 ರೂ. ಹೆಚ್ಚಳ ಸಾಧ್ಯತೆ

ಶುಕ್ರವಾರ, 27 ಫೆಬ್ರವರಿ 2015 (10:26 IST)
ರೈಲ್ವೆ ಸಚಿವ ಸುರೇಶ್ ಪ್ರಭು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಸರಕು ಸಾಗಣೆ ದರ ಏರಿ ಪ್ರಸ್ತಾವನೆ ಮಂಡಿಸಿರುವುದರಿಂದ ದೇಶಾದ್ಯಂತ ಸಿಮೆಂಟ್  ದರಗಳು ಪ್ರತಿ 50 ಕೆಜಿ ಚೀಲಕ್ಕೆ 3-5ರೂ ಹೆಚ್ಚಳವಾಗುವ ಸಾಧ್ಯತೆಯಿದೆ. ಆದರೆ ಶನಿವಾರ ಕೇಂದ್ರ ಬಜೆಟ್ ಅಧ್ಯಯನ ಮಾಡಿದ ಬಳಿಕವೇ ಸಿಮೆಂಟ್ ದರ ಏರಿಸುವ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಪ್ರಭು ಸಿಮೆಂಟ್ ಸರಕು ಸಾಗಣೆ ದರವನ್ನು ಪ್ರತಿ ಟನ್‌ಗೆ 21ರೂ.ಗಳಂತೆ ಹೆಚ್ಚಿಸಿದ್ದು, ಕಲ್ಲಿದ್ದಲು ಸಾಗಣೆ ದರವನ್ನು ಪ್ರತಿ ಟನ್‌ಗೆ 45.70 ರೂ. ಮತ್ತು ಸ್ಲಾಗ್ ಸಾಗಣೆ ದರವನ್ನು ಟನ್ನಿಗೆ 20.9ರಂತೆ ಹೆಚ್ಚಿಸಿದ್ದಾರೆ. ಇದರಿಂದ ಅತೃಪ್ತರಾಗಿರುವ ಸಿಮೆಂಟ್ ತಯಾರಕರು ಮುಖ್ಯ ಬಜೆಟ್‌ನಲ್ಲಿ ಅಂತಿಮ ಕರೆಗಾಗಿ ಕಾಯುತ್ತಿದ್ದಾರೆ.

ಕಚ್ಚಾ ವಸ್ತುಗಳು ಮತ್ತು ಸಿಮೆಂಟ್ ಸರಕು ಸಾಗಣೆ ದರದಲ್ಲಿ ಉದ್ದೇಶಿತ ಏರಿಕೆಯಿಂದ ಉತ್ಪನ್ನದ ದರಗಳನ್ನು ಪ್ರತಿ ಟನ್‌ಗೆ 20ರಿಂದ 60 ರೂ.ಗೆ ಏರಿಸುತ್ತದೆ ಎಂದು ಅಂಬುಜಾ ಸಿಮೆಂಟ್ ಸಿಎಫ್‌ಒ ಸಂಜೀವ್ ಚುರಿವಾಲಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ