2011ರ ಜಾತಿಗಣತಿ ಅಂಕಿಅಂಶ ಬಿಡುಗಡೆ: 10 ಮುಖ್ಯಾಂಶಗಳು ಕೆಳಗಿವೆ

ಶುಕ್ರವಾರ, 3 ಜುಲೈ 2015 (14:01 IST)
ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಶುಕ್ರವಾರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ 2011ನ್ನು ಶುಕ್ರವಾರ ಬಿಡುಗಡೆ ಮಾಡಿದ್ದು ನೀತಿ ನಿರೂಪಕರಿಗೆ ಇದೊಂದು  ಪ್ರಮುಖ ಮಾಹಿತಿಯಾಗಲಿದೆ ಎಂದು ಹೇಳಿದ್ದಾರೆ.

1. ಸ್ವತಂತ್ರ ಭಾರತದಲ್ಲಿ ಇದು ಮೊದಲನೇ ಜಾತಿ ಗಣತಿ
2. ಕೊನೆಯ ಜಾತಿಗಣತಿಯನ್ನು ಭಾರತದಲ್ಲಿ 1932ರಲ್ಲಿ ಮಾಡಲಾಗಿತ್ತು.
3. ದೇಶದ ಗ್ರಾಮೀಣ ಕುಟುಂಬಗಳ ಕೇವಲ 4.6% ಮಾತ್ರ ಆದಾಯ ತೆರಿಗೆ ಪಾವತಿಸುತ್ತಾರೆ.
 
4. ದೇಶದಲ್ಲಿ ಗ್ರಾಮೀಣ ಮತ್ತು ನಗರ ಸೇರಿದಂತೆ ಒಟ್ಟು ಕುಟುಂಬಗಳು 24. 39 ಕೋಟಿ.
5. ಸಾರ್ವಜನಿಕ ಕ್ಷೇತ್ರಗಳಲ್ಲಿ ಉದ್ಯೋಗಸ್ಥ ಕುಟುಂಬಗಳು ಒಟ್ಟು ಕುಟುಂಬಗಳ ಶೇ. 1.11ರಷ್ಟಿದೆ. 
6.ಶೇ. 11ರಷ್ಟು ಕುಟುಂಬಗಳು ರೆಫ್ರಿಜಿರೇಟರ್‌ಗಳನ್ನು ಹೊಂದಿವೆ. 
 
 
7.20.69% ಗ್ರಾಮೀಣ ಕುಟುಂಬಗಳು ವಾಹನ ಅಥವಾ ಮೀನುಗಾರಿಕೆ ದೋಣಿ ಹೊಂದಿವೆ. 
8. 94% ಗ್ರಾಮೀಣ ಕುಟುಂಬಗಳು ಸ್ವಂತ ಮನೆ ಹೊಂದಿದ್ದು, ಅವರ ಪೈಕಿ 54% 1-2 ಕೋಣೆಯ ಮನೆಗಳನ್ನು ಹೊಂದಿದ್ದಾರೆ. 
 
9.ಗ್ರಾಮೀಣ ವೇತನದ ಕುಟುಂಬಗಳಲ್ಲಿ ಶೇ. 5ರಷ್ಟು ಜನರು ಸರ್ಕಾರದಿಂದ ವೇತನ ಪಡೆಯುತ್ತಾರೆ, ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗಿಗಳಾಗಿರುವವರು 3.57%ರಷ್ಟು ಕುಟುಂಬಗಳು. 
10. ಭೂರಹಿತ ಮಾಲೀಕತ್ವವು ಒಟ್ಟು ಗ್ರಾಮೀಣ ಜನಸಂಖ್ಯೆಯಲ್ಲಿ 56%.70% ಎಸ್ಸಿ ಮತ್ತು 50% ಎಸ್‌ಟಿ ಭೂರಹಿತರು. 

ವೆಬ್ದುನಿಯಾವನ್ನು ಓದಿ