ಸಾವಿರ ರೂ. ವ್ಯವಹಾರ ನಡೆಸಿ 1 ಕೋಟಿ ರೂ. ಗೆದ್ದ ಗ್ರಾಹಕ!

ಸೋಮವಾರ, 10 ಏಪ್ರಿಲ್ 2017 (09:22 IST)
ನವದೆಹಲಿ: ಆತ ನಡೆಸಿದ್ದು ಕೇವಲ 1,590 ರೂಪಾಯಿ ಬ್ಯಾಂಕಿಂಗ್ ವ್ಯವಹಾರ. ಆದರೆ ಆತನ ಜೇಬಿಗೆ ಈಗ 1 ಕೋಟಿ ರೂ. ಹಣ ಬಂದು ಬಿದ್ದಿದೆ! ಅದು ಹೇಗೆ? ಎಲ್ಲಾ ಡಿಜಿಟಲ್ ಪೇಮೆಂಟ್ ನ ಕೃಪೆ!

 

ಡಿಜಿಟಲ್ ವ್ಯವಹಾರವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಲಕ್ಕಿ ಗ್ರಾಹಕರಿಗೆ 1 ಕೋಟಿ ರೂ. ಬಹುಮಾನ ನೀಡುವ ಯೋಜನೆ ಹಾಕಿಕೊಂಡಿತ್ತು. ಅದರಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅದೃಷ್ಟಶಾಲಿ ವಿಜೇತರ ಹೆಸರನ್ನು ಆಯ್ಕೆ ಮಾಡಿದ್ದರು.

 
ಒಟ್ಟು ಆರು ವಿಜೇತರನ್ನು ಆಯ್ಕೆ ಮಾಡಲಾಗಿದ್ದು ಅವರಲ್ಲಿ ಮೂವರು ಗ್ರಾಹಕರು ಮತ್ತು ಮೂರು ಸಂಸ್ಥೆಗಳು ಸೇರಿವೆ. ಮೊದಲ ಬಹುಮಾನ 1 ಕೋಟಿ ರೂ. ಇದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರ ಪಾಲಾಗಿದೆ. ದ್ವಿತೀಯ ಬಹುಮಾನ 50 ಲಕ್ಷ ರೂ.ಗಳನ್ನು ಬ್ಯಾಂಕ್ ಆಫ್ ಬರೋಡಾದ ಗ್ರಾಹಕರು ಪಡೆದುಕೊಂಡಿದ್ದಾರೆ. ತೃತೀಯ ಬಹುಮಾನ 25 ಲಕ್ಷ ರೂ.ಗಳಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ