ಒರಾಯನ್ ಮಾಲ್‍ಗಳಲ್ಲಿ ಕ್ರಿಸ್‍ಮಸ್ ಹಬ್ಬದ ಸಡಗರ

ಸೋಮವಾರ, 19 ಡಿಸೆಂಬರ್ 2016 (13:21 IST)
ಎಲ್ಲೆಡೆ ಕ್ರಿಸ್‍ಮಸ್ ಹಬ್ಬಕ್ಕೆ ತಯಾರಿ ಜೋರಾಗಿ ನಡೆಯುತ್ತಿದ್ದರೆ, ಬ್ರಿಗೇಡ್ ಗೇಟ್‍ವೇಯಲ್ಲಿರುವ ಒರಾಯನ್ ಮಾಲ್ ಮತ್ತು ಬಾಣಸವಾಡಿ ಮುಖ್ಯರಸ್ತೆಯಲ್ಲಿರುವ ಒರಾಯನ್ ಈಸ್ಟ್ ಮಾಲ್ ಹಬ್ಬದ ಋತುವನ್ನು ಆಚರಿಸುತ್ತಿವೆ. ಬೆಂಗಳೂರಿನ ಅಗ್ರಗಣ್ಯ ಶಾಪಿಂಗ್ ಸೆಂಟರ್ ಮತ್ತು ಮನೋರಂಜನೆಯ ತಾಣಗಳಾಗಿರುವ ಈ ಮಾಲ್‍ಗಳು ಗ್ರಾಹಕರಿಗೆ ಋತುವಿನ 
ಸಡಗರವನ್ನು ನೀಡುವ ಮೂಲಕ ನಿಜವಾದ ಹಬ್ಬದ ಅನುಭವವನ್ನು ನೀಡುತ್ತಿವೆ.
 
ಅತ್ಯುತ್ತಮ ಸೇವೆಗಳ ಅನುಭವವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಳ ಮಾಡುವ ಬದ್ಧತೆಯನ್ನು  ಹೊಂದಿರುವ ಒರಾಯನ್ ಮಾಲ್ ಈ ವರ್ಷ ಕ್ರಿಸ್‍ಮಸ್ ಹಬ್ಬದ ನಿಮಿತ್ತ ಉತ್ತಮ ತಂತ್ರಜ್ಞಾನ ಬಳಸಿಕೊಂಡು ಸಾಂಪ್ರದಾಯಿಕ ಕಲೆಗಳು, ವಿನ್ಯಾಸ ಮತ್ತು ಕ್ರಿಸ್‍ಮಸ್ ಚಿಹ್ನೆಯನ್ನು ಪ್ರತಿರೂಪಿಸಲಿದೆ. ಈ ಕಣ್ಣು ಕೋರೈಸುವ ಮತ್ತು ಮುದ ನೀಡುವ ಚಿತ್ರಣ 
ಬ್ರಿಗೇಡ್ ಗೇಟ್‍ವೇನಲ್ಲಿರುವ ಒರಾಯನ್ ಮಾಲ್ ಮತ್ತು ಒರಾಯನ್ ಈಸ್ಟ್ ಮಾಲ್‍ನಲ್ಲಿ ಇರಲಿದೆ.
 
ಎರಡೂ ಮಾಲ್‍ಗಳ ಲಾಬಿಯಲ್ಲಿ ಎತ್ತರದ ಕ್ರಿಸ್‍ಮಸ್ ಟ್ರೀ ಮನಮೋಹಕವಾಗಿದೆ. ಇಲ್ಲಿಗೆ ಬರುವ ನಾಗರಿಕರು ತಮ್ಮ ಸ್ಮಾರ್ಟ್‍ಫೋನ್‍ಗಳನ್ನು ಹೊರತೆಗೆದು ಈ ಮರದ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳಬಹುದು. ಮಾಲ್‍ಗಳ ಹತ್ತಿರಕ್ಕೆ ಹೋಗುತ್ತಿರುವಂತೆ ಝಗಮಗಿಸುವ ವಿದ್ಯುದೀಪಗಳ ಅಲಂಕಾರ, ಮೆಟ್ಟಿಲುಗಳಲ್ಲೂ ಕಣ್ಣು ಕೋರೈಸುವ ವಿದ್ಯುದ್ದೀಪಾಲಂಕಾರ ಇರಲಿದೆ. ಲಾಬಿಗಳಲ್ಲಿನ ಅಲಂಕಾರ ಮುದ ನೀಡುವಂತಿದೆ. 
 
ಸುಂದರವಾದ ಘಂಟೆಗಳು ಮತ್ತು ವಿದ್ಯುದ್ದೀಪಾಲಂಕಾರಗಳು ನೋಡುಗರನ್ನು ಕುಣಿದು ಕುಪ್ಪಳಿಸುವಂತೆ ಮಾಡಲಿವೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ಸಾಂತಾ. ಈ ಸಾಂತಾಕ್ಲಾಸ್ ಜತೆ ಮಕ್ಕಳು ಮತ್ತು ಕುಟುಂಬ ಸದಸ್ಯರು ಸೆಲ್ಫಿ ತೆಗೆದುಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಬ್ರಿಗೇಡ್ ಗೇಟ್‍ವೇಯಲ್ಲಿರುವ ಒರಾಯನ್ ಮಾಲ್‍ನ ಲೇಕ್‍ಸೈಡ್‍ನಲ್ಲಿ ಕಣ್ಣು 
ಕೋರೈಸುವಂತ ವಿದ್ಯುದ್ದೀಪಗಳೊಂದಿಗೆ ಕ್ರಿಸ್‍ಮಸ್ ಲ್ಯಾಂಡ್ ನಿರ್ಮಾಣವಾಗಿದ್ದು ನೋಡುಗರ ಮನಸೂರೆಗೊಳ್ಳಲಿದೆ.
 
ಒರಾಯನ್ ಈ ಹಬ್ಬದ ಋತುವಿಗೆ ಡಿಸೆಂಬರ್ 15 ರಂದು ಚಾಲನೆ ನೀಡಿದ್ದು, ಈ ಅದ್ಧೂರಿ ಅಲಂಕಾರಗಳು ಡಿಸೆಂಬರ್ 25ರವರೆಗೆ ಮುಂದುವರೆಯಲಿವೆ. ಈ ಬಗ್ಗೆ ಮಾಹಿತಿ ನೀಡಿದ ಒರಾಯನ್‍ನ ರೀಟೇಲ್ ಮತ್ತು ಕಮರ್ಷಿಯಲ್ ವಿಭಾಗದ ಸಿಇಒ ವಿಶಾಲ್ ಮೀರ್‍ಚಂದಾನಿ ಅವರು, ``ಒರಾಯನ್ ಮಾಲ್‍ಗಳಲ್ಲಿ ಗ್ರಾಹಕರ ಸುಂದರ ಅನುಭವವನ್ನು ಹೆಚ್ಚಿಸುವುದು ನಮ್ಮ ಬದ್ಧತೆಯಾಗಿದೆ. 
 
ಬ್ರಿಗೇಡ್ ಗೇಟ್‍ವೇಯ ಒರಾಯನ್ ಮಾಲ್ ಮತ್ತು ಒರಾಯನ್ ಈಸ್ಟ್ ಮಾಲ್‍ನಲ್ಲಿ ಅತ್ಯಂತ ಮನಮೋಹಕವಾದ ಕ್ರಿಸ್‍ಮಸ್ ಅಲಂಕಾರವನ್ನು ಮಾಡಲಾಗಿದೆ. ಅದೇ ರೀತಿ ಗ್ರಾಹಕರ ಮನತಣಿಸಲು ಮನೋರಂಜನೆಯನ್ನೂ ನೀಡಲಾಗುತ್ತಿದೆ’’ ಎಂದು ತಿಳಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ