ಐದು ವರ್ಷಗಳಲ್ಲಿ ಕೋಲ್ ಇಂಡಿಯಾ ಶತಕೋಟಿ ಟನ್ ಉತ್ಪಾದನೆ

ಶುಕ್ರವಾರ, 28 ನವೆಂಬರ್ 2014 (17:10 IST)
ಕೋಲ್ ಇಂಡಿಯಾ(ಸಿಐಎಲ್) ಮುಂದಿನ ಐದು ವರ್ಷಗಳಲ್ಲಿ ತನ್ನ ಉತ್ಪಾದನೆಯನ್ನು ದುಪ್ಪಟ್ಟು ಮಾಡಿ ಶತಕೋಟಿ ಟನ್‌ಗಳಿಗೆ ಹೆಚ್ಚಿಸಲು ನೋಡುತ್ತಿದೆ ಎಂದು ವಿದ್ಯುತ್ ಮತ್ತು ಕಲ್ಲಿದ್ದಲು ಸಚಿವ ಪಿಯುಶ್ ಗೋಯಲ್  ಗುರುವಾರ ತಿಳಿಸಿದರು.

ಕೋಲ್ ಇಂಡಿಯಾ ಉತ್ಪಾದನೆ  ಮುಂದಿನ ಐದು ವರ್ಷಗಳಲ್ಲಿ ಇಮ್ಮಡಿಯಾಗಿ, ಈ ವರ್ಷ 500 ದಶಲಕ್ಷ ಟನ್ ಉತ್ಪಾದನೆ ಮಾಡುವ ಆಶಯ ಹೊಂದಿದ್ದೇವೆ. 2019ರಲ್ಲಿ ನಾವು ಶತಕೋಟಿ ಟನ್ ಉತ್ಪಾದಿಸುತ್ತೇವೆ  ಎಂದು ಭಾರತ ಆರ್ಥಿಕ ಶೃಂಗಸಭೆಯಲ್ಲಿ ಗೋಯಲ್ ಹೇಳಿದರು.ಹೊಸ ಮತ್ತು ನವೀಕೃತ ಇಂಧನದ ಸಚಿವರು ಕೂಡ ಆಗಿರುವ ಗೋಯಲ್ ಇಂಧನ ಕ್ಷೇತ್ರದಲ್ಲಿ ಮುಂದಿನ ನಾಲ್ಕೈದು ವರ್ಷಗಳಲ್ಲಿ 250 ಶತಕೋಟಿ ಡಾಲರ್ ಬೃಹತ್ ಬಂಡವಾಳ ಅವಕಾಶವಿದೆ.

ಇದರಲ್ಲಿ ನವೀಕೃತ ಇಂಧನದಲ್ಲಿ 100 ಶತಕೋಟಿ ಮತ್ತು ಪ್ರಸರಣ ಮತ್ತು ವಿತರಣೆಯಲ್ಲಿ 50 ಶತಕೋಟಿ ಡಾಲರ್ ಬಂಡವಾಳ ಹೂಡಿಕೆ ಕೂಡ ಅದರಲ್ಲಿ ಸೇರಿದೆ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ