ವಾಟ್ಸಪ್ ಮೂಲಕ ವೀಡಿಯೊ ಕರೆ ಮಾಡಿ

ಮಂಗಳವಾರ, 10 ಮೇ 2016 (12:15 IST)
ತ್ವರಿತ ಸಂದೇಶ ಸೇವೆ ನೀಡುತ್ತಿರುವ ವಾಟ್ಸಪ್, ವೀಡಿಯೊ ಕರೆ ವೈಶಿಷ್ಟ್ಯವನ್ನು ಅನಾವರಣಗೊಳಿಸಲಿದೆ ಎಂದು ಕಳೆದ ತಿಂಗಳಿಂದ ವದಂತಿಗಳು ಹರಡಿದ್ದವು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಈ ವಂದತಿಗಳಲ್ಲಿ ನಿಖರತೆ ಇರುವುದಾಗಿ ತಿಳಿಸಿದೆ.
ಆಂಡ್ರಾಯ್ಡ್ ಪೊಲೀಸ್ ವರದಿಯ ಪ್ರಕಾರ, ದೈತ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಒಡೆತನದ ಮೆಸೆಜಿಂಗ್ ಆಪ್ ಬಳಕೆದಾರರಿಗೆ ವೀಡಿಯೊ ಕರೆ ವೈಶಿಷ್ಟ್ಯವನ್ನು ನೀಡುವ ಪ್ರಯತ್ನ ನಡೆಸಿದ್ದು, ಈ ವೈಶಿಷ್ಟ್ಯ ಬೀಟಾ ಆವೃತ್ತಿಯ ಕೆಲವು ಡಿವೈಸ್‌ಗಳಲ್ಲಿ ಮಾತ್ರ ಬಳಕೆ ಮಾಡಬಹುದು ಎಂದು ತಿಳಿಸಿದೆ.
 
ಇತ್ತೀಚಿಗೆ ವಾಟ್ಸಪ್ ಗೂಢಲಿಪೀಕರಣದಂತಹ ಹೊಸ ವೈಶಿಷ್ಟ್ಯವನ್ನು ಪರಿಗಣಿಸಿ, ಶೀಘ್ರದಲ್ಲೇ ಮೆಸೆಜಿಂಗ್ ಆಪ್ ವೀಡಿಯೊ ಕರೆ ವೈಶಿಷ್ಟ್ಯವನ್ನು ಪರಿಚಯಿಸುವ ನಿರೀಕ್ಷಿಸಲಾಗಿದೆ.
 
ಮೆಸೆಜಿಂಗ್ ಆಪ್ ವೀಡಿಯೊ ಕರೆ ವೈಶಿಷ್ಟ್ಯವನ್ನು ಪರಿಚಯಿಸುವ ಮೂಲಕ ಸ್ಕೈಪ್, ಐಎಮ್‌ಓ ಮತ್ತು ಮೆಸೆಂಜರ್ ಅಪ್ಲಿಕೇಶನ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ