ನೆಸ್ಲೆ ಇಂಡಿಯಾ ಸಿಇಒ ಎಟಿನೆ ಬೆನೆಟ್ ಎತ್ತಂಗಡಿ

ಶುಕ್ರವಾರ, 24 ಜುಲೈ 2015 (19:56 IST)
ನೆಸ್ಲೆ ಇಂಡಿಯಾ ಮ್ಯಾಗಿ ನಿಷೇಧದ ವಿರುದ್ಧ ಕಾನೂನು ಸಮರಕ್ಕೆ ಇಳಿದಿರುವ ನಡುವೆ, ಕಂಪನಿಯ ಭಾರತ ಸಿಇಒ ಎಟಿನೆ ಬೆನೆಟ್ ಜುಲೈ 25ರಂದು ಎತ್ತಂಗಡಿ ಆಗಲಿದ್ದಾರೆ.  ಮುಂಬೈ ಷೇರು ಪೇಟೆಗೆ ಕಂಪನಿ ಸಲ್ಲಿಸಿದ ಫೈಲಿಂಗ್‌ನಲ್ಲಿ  ಪ್ರಸಕ್ತ ನೆಸ್ಲೆ ಫಿಲಿಪ್ಪೀನ್ಸ್ ಚೇರ್ ಮನ್ ಮತ್ತು ಸಿಇಒ ಆಗಿರುವ ಸುರೇಶ್ ನಾರಾಯಣ್ ಅವರು ಅಧಿಕೃತವಾಗಿ ಭಾರತದ ಕಾರ್ಯನಿರ್ವಹಣೆಯನ್ನು ಆಗಸ್ಟ್ ಒಂದರಿಂದ ವಹಿಸಿಕೊಳ್ಳಲಿದ್ದಾರೆ. ಅಲ್ಲಿವರೆಗೆ ಅವರು ನಿಯೋಜಿತರಾಗಿ ಕಾರ್ಯನಿರ್ವಹಿಸುತ್ತಾರೆ. 
 
 ಏತನ್ಮಧ್ಯೆ ಬೆನೆಟ್ ಅವರನ್ನು ನೆಸ್ಲೆ ಸಮೂಹದ ಮುಖ್ಯ ಕಚೇರಿಗೆ ಸ್ಥಳಾಂತರಗೊಳಿಸಲಾಗುತ್ತದೆ.  ಕಳೆದ ಜೂನ್‌ನಲ್ಲಿ ಆಹಾರ ಸುರಕ್ಷತೆ ನಿಯಂತ್ರಕವು ನೆಸ್ಲೆಗೆ ಮ್ಯಾಗಿ ನೂಡಲ್ಸ್ ವಾಪಸ್ ಪಡೆಯುವಂತೆ ಸೂಚಿಸಿತ್ತು.

ಮ್ಯಾಗಿನೂಡಲ್ಸ್ ಕೆಲವು ಮಾದರಿಗಳಲ್ಲಿ ಅಂಗೀಕಾರ್ಹ ಮಿತಿಗಿಂತ ಹೆಚ್ಚು ಸೀಸವನ್ನು ಹೊಂದಿರುವುದು ಪತ್ತೆಯಾಗಿತ್ತು. ಆದರೆ ಕಂಪನಿಯು ಈ ಪರೀಕ್ಷೆಗಳನ್ನು ತಿರಸ್ಕರಿಸಿ ತಮ್ಮ ಪ್ರತ್ಯೇಕ ಪರೀಕ್ಷೆಗಳಲ್ಲಿ ಸೀಸದ ಪ್ರಮಾಣ ಹೆಚ್ಚಿರಲಿಲ್ಲ ಎಂದು ತಿಳಿಸಿತ್ತು. 
 

ವೆಬ್ದುನಿಯಾವನ್ನು ಓದಿ