ಭಾರತೀಯರ ಕಂಪ್ಯೂಟರ್‌ಗಳಿಗೆ ಬ್ಲಾಡಾಬಿಂಡಿ ವೈರಸ್‌ ದಾಳಿ ಆತಂಕ

ಶನಿವಾರ, 26 ಜುಲೈ 2014 (19:00 IST)
ಭಾರತದ ಕಂಪ್ಯೂಟರ್‌ಗಳ ಮೇಲೆ ಬ್ಲಾಡಾಬಿಂಡಿ ವೈರಸ್‌‌ಗಳ ದಾಳಿ ಆತಂಕ ತಂದಿದೆ. ಸೈಬರ್ ಸುರಕ್ಷಾ ಅಧಿಕಾರಿಗಳು ಭಾರತದ ಇಂಟರ್‌ನೆಟ್‌ ಬಳಕೆದಾರರಿಗೆ ಈ ಬಹುರೂಪಿ ವೈರಸ್‌‌ನಿಂದ ಎಚ್ಚರದಿಂದಿರಲು ತಿಳಿಸಿದ್ದಾರೆ. 
 
ಈ ವೈರಸ್‌ ತನ್ನ ವಾಸ್ತವಿಕ ಗುರುತು ಮುಚ್ಚಿಡಲು 12 ರೂಪಗಳು ತಾಳುತ್ತದೆ ಮತ್ತು ಕಂಪ್ಯೂಟರ್‌ ಸಿಸ್ಟಮ್‌ ಅಥವಾ ಬಳಕೆದಾರರ ಖಾಸಗಿ ವಿಷಯಗಳನ್ನು ಪಡೆದುಕೊಳ್ಳುತ್ತದೆ. 
 
ಈ ವೈರಸ್ ಮೈಕ್ರೋಸಾಫ್ಟ್‌ನ ವಿಂಡೋಸ್ ಅಪರೇಟಿಂಗ್‌ ಸಿಸ್ಟಮ್‌‌‌ ಹಾಳು ಮಾಡುತ್ತದೆ ಎಂದು ಕಂಪ್ಯೂಟರ್‌ ಎಮರ್ಜೆನ್ಸಿ ರಿಸ್ಪಾನ್ಸ್‌ ಟಿಮ್- ಇಂಡಿಯಾ ತಿಳಿಸಿದೆ. 
 
ಇದು ಬೇರೆ ಮೇಲ್‌‌ ವೆಯರ್‌ ತರಹ ಪೆನ್‌‌ಡ್ರೈವ್ ಮತ್ತು ಡಾಟಾ ಕಾರ್ಡ್‌ನಿಂದ ಹರಡುತ್ತದೆ. ಸರ್ಟ್‌-ಇನ್‌ ಒಂದು ರಾಷ್ಟ್ರೀಯ ಎಜೆನ್ಸಿಯಾಗಿದೆ. ಇದು ಭಾರತೀಯ ಇಂಟರ್‌ನೆಟ್‌‌ ಕ್ಷೇತ್ರದ ಹ್ಯಾಕಿಂಗ್‌‌ನಿಂದ ಉಳಿಸಲು ಮತ್ತು ಸುರಕ್ಷೆಯ ವ್ಯವಸ್ಥೆ ಸಿದ್ದ ಪಡಿಸುವ ಕಾರ್ಯ ನಿರ್ವಹಿಸುತ್ತದೆ. 
 
ಬ್ಲಾಡಾಬಿಂಡಿಯಿಂದ ತಪ್ಪಿಸಿಕೊಳ್ಳಲು ಎಜೆನ್ಸಿ ಕೆಲವು ಉಪಾಯಗಳನ್ನು ನೀಡಿದೆ. ಫ್ರೀ ಮೇಲ್‌ ವೆಯರ್‌-ವೈರಸ್‌ ರಿಮೂವಲ್‌ ಟೂಲ್‌‌ನಿಂದ ಕಂಪ್ಯೂಟರ್ ಸ್ಕ್ಯಾನ್‌ ಮಾಡಿ. ವಿಂಡೋಸ್‌‌ನಲ್ಲಿ ಆಟೆರನ್‌ ಬಂದ್ ಮಾಡಿಡಿ. ಯೂಎಸ್‌ಬಿ ಕ್ಲೀನ್‌ ಅಥವಾ ವೈಕ್ಸಿನೆಶನ್‌ ಸಾಫ್ಟ್‌ವೇಯರ್‌ ಬಳಕೆ ಮಾಡಿ. ಅಪರೇಟಿಂಗ್‌ ಸಿಸ್ಟಮ್‌‌‌ನ ಸೆಕ್ಯೂರಿಟಿ ಪೈಚ್‌ ಇನಸ್ಟಾಲ್‌ ಮಾಡುತ್ತಲಿರಿ ಮತ್ತು ಇದನ್ನು ಅಪಡೆಟ್‌ ಮಾಡುತ್ತಿರಿ. ಆಂಟಿವೈರಸ್‌ ಮತ್ತು ಆಂಟಿಸ್ಪಾಯಿವೆಯರ್‌ ಅಪಡೆಟ್‌ ಮಾಡುತ್ತಾ ಇರಿ.. 

ವೆಬ್ದುನಿಯಾವನ್ನು ಓದಿ