ನಾಳೆಯಿಂದಲೇ ಫ್ರಿಡಂ 251 ಸ್ಮಾರ್ಟ್‌ಫೋನ್ ಡೆಲಿವರಿ ಆರಂಭ

ಬುಧವಾರ, 6 ಜುಲೈ 2016 (18:39 IST)
ವಿಶ್ವದ ಅತೀ ಕಡಿಮೆ ಬೆಲೆಯ ಸ್ಮಾರ್ಟ್‌ಪೋನ್‌ಗಳನ್ನು ನೀಡುವುದಾಗಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ರಿಂಗಿಂಗ್ ಬೆಲ್ಸ್ ಸಂಸ್ಥೆ, ಕಡಿಮೆ ಬೆಲೆಯ ಫ್ರಿಡಂ-251 ಸ್ಮಾರ್ಟ್‌ಪೋನ್‌ಗಳನ್ನು ನಾಳೆಯಿಂದ ಗ್ರಾಹಕರಿಗೆ ವಿತರಿಸುವುದು ಮಾಧ್ಯಮ ವರದಿಗಳ ಮೂಲಕ ಖಚಿತವಾಗಿದೆ. 
 
ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಸಂಸ್ಥೆ, ಎಚ್‌ಡಿ ಎಲ್‌ಇಡಿ ಟೆಲಿವಿಷನ್ ಉತ್ಪಾದಿಸಲು ಯೋಜನೆ ರೂಪಿಸುತ್ತಿದ್ದು, ಎಲೆಕ್ಟ್ರಾನಿಕ್ ವಿಭಾಗದಲ್ಲಿ ಸಂಚಲನ ಮೂಡಿಸುವ ನಿರೀಕ್ಷೆ ಹೊಂದಿದೆ.
 
ಎಚ್‌ಡಿ ಎಲ್‌ಇಡಿ ಟೆಲಿವಿಜನ್ ಬೆಲೆಯನ್ನು ಬಹಿರಂಗ ಪಡಿಸಿಲ್ಲ. ಆದರೆ, ಈ ಭಾರತೀಯ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಮತ್ತೋಮ್ಮೆ ದರ ಸಮರ ಸಾರಲಿದೆ ಎಂದು ರಿಂಗಿಂಗ್ ಬೆಲ್ಸ್ ಸಂಸ್ಥೆ ತಿಳಿಸಿದೆ.
 
ಈಗಾಗಲೇ ಎರಡು ಲಕ್ಷ ಸ್ಮಾರ್ಟ್‌ಪೋನ್‌ಗಳನ್ನು ಉತ್ಪಾದನೆ ಮಾಡಲಾಗಿದೆ ಎಂದು ರಿಂಗಿಂಗ್ ಬೆಲ್ಸ್ ಸಂಸ್ಥೆಯ ಮುಖ್ಯಸ್ಥೆ ಮೋಹಿತ ಗೋಯಲ್ ತಿಳಿಸಿದ್ದಾರೆ.
 
ರಿಂಗಿಂಗ್ ಬೆಲ್ಸ್‌ ಸಂಸ್ಥೆ, ಪ್ರಸಕ್ತ ಸಾಲಿನ ಫೆಬ್ರುವರಿ ತಿಂಗಳಿನಿಂದ ಆನ್‌ಲೈನ್ ಮೂಲಕ ಫ್ರಿಡಂ-251 ಸ್ಮಾರ್ಟ್‌ಪೋನ್‌ಗಳನ್ನು ಮಾರುವುದಾಗಿ ಘೋಷಿಸಿತ್ತು. ಕಡಿಮೆ ದರದ ಸ್ಮಾರ್ಟ್‌ಪೋನ್‌ ಖರೀದಿಸಲು 7 ಕೋಟಿ ಜನರು ನೋಂದಣಿ ಮಾಡಿಕೊಂಡಿದ್ದರು. ಮತ್ತು 30 ಸಾವಿರ ಗ್ರಾಹಕರು ಮುಂಗಡ ಹಣ ಪಾವತಿ ಮಾಡಿಕೊಳ್ಳುವ ಮೂಲಕ ನೋಂದಣಿ ಮಾಡಿಕೊಂಡಿದ್ದರು.  
 
ಕೇಂದ್ರ ಸರಕಾರ ಕಂಪೆನಿಯ ವಹಿವಾಟಿನ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದ್ದಲ್ಲದೇ ಕಂಪೆನಿಯ ಕಚೇರಿಯ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ರಿಂಗಿಂಗ್ ಬೆಲ್ ಕಂಪೆನಿ, ತನ್ನ ಉತ್ಪನ್ನವನ್ನು ವಾಪಸ್ ಪಡೆದುಕೊಂಡಿದ್ದಲ್ಲದೇ ಹಣವನ್ನು ಗ್ರಾಹಕರಿಗೆ ಮರಳಿ ನೀಡಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ