18 ಮಾರುಕಟ್ಟೆಗಳ ನೆಲಸಮಕ್ಕೆ ಕಾಂಗ್ರೆಸ್ ಜೆಡಿಎಸ್ ಪ್ರತಿಭಟನೆ

ಗುರುವಾರ, 27 ನವೆಂಬರ್ 2014 (18:08 IST)
ಕಾಂಗ್ರೆಸ್ ಮತ್ತು ಜನತಾದಳ ಸದಸ್ಯರ ಪ್ರತಿಭಟನೆ ಮತ್ತು ಸಭಾತ್ಯಾಗದ ನಡುವೆ, ಬಿಬಿಎಂಪಿ ಕೌನ್ಸಿಲ್  ಬುಧವಾರ 18 ಹಳೆಯ ಮಾರುಕಟ್ಟೆಗಳನ್ನು ನೆಲಸಮ ಮಾಡಿ ಅವುಗಳ ಜಾಗದಲ್ಲಿ ಹೊಸ ಕಟ್ಟಡಗಳನ್ನು ಕಟ್ಟುವ ಪ್ರಸ್ತಾಪವನ್ನು ಅನುಮೋದಿಸಿತು. ನೆಲಸಮ ಮಾಡಲು ಗುರುತಿಸಲಾದ ಬಹುಮಟ್ಟಿನ ಮಾರುಕಟ್ಟೆಗಳು 60 ವರ್ಷಕ್ಕಿಂತ ಹಳೆಯದು.

ಜಾನ್ಸನ್ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಜಂಟಿ ಉದ್ಯಮ ಪ್ರಸ್ತಾಪವನ್ನು ಪ್ರಸ್ತಾಪಿಸಿದ ಜನತಾದಳ(ಎಸ್) ನಾಯಕ ಆರ್. ಪ್ರಕಾಶ್, ಬಿಬಿಎಂಪಿ ಜಾನ್ಸನ್ ಮಾರುಕಟ್ಟೆಯನ್ನು ಈಗಾಗಲೇ ಅಡವು ಇಟ್ಟಿದೆ. ನಾವು ಮಾಲ್ ಸಂಸ್ಕೃತಿಗೆ ಹೋಗಬಾರದು. ಈ ಮಾರುಕಟ್ಟೆ ಜಾಗದಲ್ಲಿ ಮಾಲ್ ಕಟ್ಟಿದರೆ ವಾಹನ ದಟ್ಟಣೆ ಸಮಸ್ಯೆ ದುಪ್ಪಟ್ಟಾಗುತ್ತದೆ.

ಈ ಮಾರುಕಟ್ಟೆಗಳ ಅಭಿವೃದ್ಧಿಯಿಂದ ಸಣ್ಣ ವ್ಯಾಪಾರಿಗಳು ಅತಂತ್ರಸ್ಥಿತಿಗೆ ತಲುಪುತ್ತಾರೆ ಎಂದು ಹೇಳಿದರು. ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಡಪ್ಪ ಈ ನಿರ್ಧಾರವನ್ನು ಸಮರ್ಥಿಸಿಕೊಂಡು, ಬಾಡಿಗೆ ಸಂಗ್ರಹಿಸುತ್ತಿರುವುದು ಕಡಿಮೆಯಾಗಿದ್ದು ನಿರ್ವಹಣೆ ತ್ರಾಸದಾಯಕವಾಗಿದೆ. ಕೆಲವು ಮಾರುಕಟ್ಟೆಗಳಲ್ಲಿ ಬಾಡಿಗೆದಾರರು 30 ವರ್ಷಗಳಿಂದ ಬಾಡಿಗೆ ಕಟ್ಟಿಲ್ಲ ಎಂದು ಹೇಳಿದರು. 
 

ವೆಬ್ದುನಿಯಾವನ್ನು ಓದಿ