ದಾವಣಗೆರೆ ಸ್ಮಾರ್ಟ್ ಸಿಟಿಯಾಗುವ ಆಸೆ ನುಚ್ಚುನೂರು

ಶನಿವಾರ, 31 ಜನವರಿ 2015 (09:29 IST)
ಜವಳಿ ಉದ್ಯಮಕ್ಕೆ ಹೆಸರಾದ ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿಯಾಗುವ ಮಾತು ಕೇಳಿಬಂದ ಬಳಿಕ ಅಭಿವೃದ್ಧಿಯ ಆಸೆ ಚಿಗುರಿತ್ತು. ಸ್ಮಾರ್ಟ್ ಸಿಟಿಗೆ 5 ಲಕ್ಷ ಜನಸಂಖ್ಯೆ ಇರಬೇಕೆಂಬ ನಿಯಮವಿದ್ದು, ದಾವಣಗೆರೆ ಅದಕ್ಕೆ ಸೂಕ್ತವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸುವ ಮೂಲಕ ಜನರ ಕನಸು ಕನಸಾಗಿಯೇ ಉಳಿದಿದೆ.

ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿಯ ನಿರ್ಮಾಣದ ಬಗ್ಗೆ ಸಚಿವ ಶಾಮನೂರು ಶಿವಶಂಕರಪ್ಪ ಕೇಂದ್ರಕ್ಕೆ ಪತ್ರ ಬರೆದಿದ್ದರು. ಆದರೆ ಕೇಂದ್ರದಿಂದ ನಕಾರಾತ್ಮಕ ಉತ್ತರ ಬಂದಿರುವುದರಿಂದ ಸ್ಮಾರ್ಟ್ ಸಿಟಿ ಕನಸು ನುಚ್ಚುನೂರಾಗಿದೆ. ಕೇಂದ್ರದ ಪ್ರಕಾರ ಸ್ಮಾರ್ಟ್‌ಸಿಟಿಗೆ ದಾವಣಗೆರೆ ಫಿಟ್ ಆಗುವುದಿಲ್ಲ.

ಸ್ಮಾರ್ಟ್ ಸಿಟಿಯ ಕೆಲವು ಮಾನದಂಡಗಳನ್ನು ದಾವಣಗೆರೆ ಪೂರೈಸುವುದಿಲ್ಲ ಎಂದೂ ಕೇಂದ್ರ ಸರ್ಕಾರ ಉತ್ತರ ಕಳಿಸಿರುವುದರಿಂದ ದಾವಣಗೆರೆ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಯ ಕನಸು ಕಂಡಿದ್ದ ಜನರಿಗೆ ನಿರಾಶೆಯ ಕಾರ್ಮೋಡ ಕವಿದಿದೆ.

ವೆಬ್ದುನಿಯಾವನ್ನು ಓದಿ