ಭಾರತದ ಈರುಳ್ಳಿಗೆ ಅಂತಾರಾಷ್ಟ್ರೀಯ ಬೇಡಿಕೆ ಹೆಚ್ಚಳ

ಸೋಮವಾರ, 13 ಏಪ್ರಿಲ್ 2015 (17:44 IST)
ಪಾಕಿಸ್ತಾನದಲ್ಲಿ ಭಾರತದ ಈರುಳ್ಳಿಗೆ ಭಾರೀ ಬೇಡಿಕೆಯಿದ್ದು ಶೇ. 15ರಷ್ಟು ದುಬಾರಿಯಾಗಿದೆ.  ಆದರೆ ಸ್ವದೇಶದಲ್ಲಿ ಈರುಳ್ಳಿ ದರಗಳು ಶೇ. 5ರಷ್ಟು ಕುಸಿತ ಅನುಭವಿಸಿದೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ್, ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ಬೆಳೆ ಪೂರ್ಣ ಮಟ್ಟದಲ್ಲಿದ್ದು, ದರಗಳು ಮತ್ತಷ್ಟು ಕುಸಿಯುವ ಲಕ್ಷಣಗಳನ್ನು ತೋರಿಸಿದೆ. 
 
ಪಾಕಿಸ್ತಾನವಲ್ಲದೇ ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ, ಸಿಂಗಪುರ, ಇಂಡೋನೇಶಿಯಾ ಮತ್ತು ಕೊಲ್ಲಿ ರಾಷ್ಟ್ರಗಳಿಂದ ಕೂಡ ಈರುಳ್ಳಿಗೆ ಬೇಡಿಕೆ ಹೆಚ್ಚಿರುವುದು ಭಾರತದ ರೈತರಿಗೆ ಪ್ರೋತ್ಸಾಹ ನೀಡಿದೆ. 
 
ಆದರೆ ರೈತರಿಗೆ ಲಾಭದಾಯಕ ದರವನ್ನು ಸರ್ಕಾರ ಖಾತರಿ ಮಾಡಬೇಕು ಎಂದು ನಿರೀಕ್ಷಿಸುವುದಾಗಿ  ನಾಶಿಕ್ ಜಿಲ್ಲಾ ಈರುಳ್ಳಿ ವ್ಯಾಪಾರಿ ಸಂಘದ ಅಧ್ಯಕ್ಷ ಸೋಹನ್ ಲಾಲ್ ಭಂಡಾರಿ ತಿಳಿಸಿದ್ದಾರೆ. 
 
ನಾಸಿಕ್ ಮಂಡಿಗೆ ದಿನನಿತ್ಯ 2 ಲಕ್ಷಕ್ಕೂ ಹೆಚ್ಚು ಕ್ವಿಂಟಾಲ್ ಈರುಳ್ಳಿ ಬರುತ್ತಿದ್ದು, ದರಗಳು ಪ್ರತಿ ಕೆಜಿಗೆ 7-12 ರೂ.ಗಳಾಗಿವೆ.  ದೆಹಲಿ ಮೂಲದ ರಫ್ತುದಾರರಿಗೆ ನಾಸಿಕ್ ಈರುಳ್ಳಿಯನ್ನು ಕಳಿಸುವಂತೆ ಪಾಕಿಸ್ತಾನ ವ್ಯಾಪಾರಿಗಳು ಆರ್ಡರ್ ಬುಕ್ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ