ಬ್ಯಾಂಕ್ ಆಪ್ಸ್‌ಗೆ ಮುಗಿಬಿದ್ದ ಜನ ಸಿಕ್ಕಾಪಟ್ಟೆ ಡೌನ್‍ಲೋಡ್

ಸೋಮವಾರ, 26 ಡಿಸೆಂಬರ್ 2016 (11:39 IST)
ಅಧಿಕ ಮೌಲ್ಯದ ನೋಟು ನಿಷೇಧದ ಹಿನ್ನೆಲೆಯಲ್ಲಿ ಮೊಬೈಲ್ ಫೋನ್‍ಗಳಲ್ಲಿ ವಹಿವಾಟು ನಡೆಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನಗದಿಗಾಗಿ ಬ್ಯಾಂಕು, ಎಟಿಎಂಗಳ ಮುಂದೆ ನಿಲ್ಲುವುದಕ್ಕಿಂತ ಆಪ್ಸ್ ಮೂಲಕ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಲು ಜನ ಮುಂದಾಗಿದ್ದಾರೆ. 
 
ಇಷ್ಟು ದಿನ ಬ್ಯಾಂಕ್ ಆಪ್ಸ್ ಕಡೆ ಕಣ್ಣೆತ್ತಿಯೋ ನೋಡವರೂ ಈಗ ಅದನ್ನು ಡೌನ್‍ಲೋಡ್ ಮಾಡಿಕೊಂಡು ಬಳಸಲು ಆರಂಭಿಸಿದ್ದಾರೆ. ಹಾಗಾಗಿ ಬ್ಯಾಂಕ್ ಆಪ್ಸ್ ಡೌನ್‌ಲೋಡ್ ಸಂಖ್ಯೆ ಲಕ್ಷಗಳಲ್ಲಿ ಬೆಳೆದುಹೋಗುತ್ತಿದೆ. ನಗದುರಹಿತ ವ್ಯವಹಾರಕ್ಕೆ ಡಿಜಿಟಲ್ ಇಂಡಿಯಾ ಮಾರ್ಗದಲ್ಲಿ ಹೆಚ್ಚುಹೆಚ್ಚು ಜನ ಪ್ರಯಾಣ ಮಾಡಕ್ಕೆ ಹೊರಟಿದ್ದಾರೆ.
 
ಇತ್ತೀಚೆಗೆ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಪೇಸ್ (ಯುಪಿಐ) ಆಪ್‌ಗಳು ಬಂದಿವೆ. ಇದರಿಂದ ಕೈಯಲ್ಲಿ ನಗದು ಇಲ್ಲದಿದ್ದರೂ ಪ್ರತಿದಿನ ವ್ಯವಹಾರವನ್ನು ಆಪ್ ಮೂಲಕ ನಡೆಸಲು ಸಾಧ್ಯವಾಗಿದೆ. ಈ ಮೊಬೈಲ್ ಆಪ್‌ಗಳ ಮೂಲಕ ನಗದನ್ನು ಸುಲಭವಾಗಿ ಬ್ಯಾಂಕ್‍ ಖಾತೆಗಳಿಗೆ ಜಮೆ ಮಾಡಬಹುದು. ಖಾತೆಯಲ್ಲಿರುವ ಠೇಣಣಿಯನ್ನು ತಿಳಿದುಕೊಳ್ಳಬಹುದು. ಈ ಹಿಂದೆ ನಡೆಸಿರುವ ವ್ಯವಹಾರ ತಿಳಿದುಕೊಳ್ಳಬಹುದು, ನಾನಾ ರೀತಿಯ ಹಣ ವರ್ಗಾವಣೆ ಸಾಧ್ಯ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ