ಸ್ಮಾರ್ಟ್‌ಫೋನ್ ನೀರಿನೊಳಕ್ಕೆ ಬಿದ್ದಾಗ ಉಳಿಸುವುದು ಹೇಗೆ?

ಮಂಗಳವಾರ, 21 ಏಪ್ರಿಲ್ 2015 (18:58 IST)
ನಿಮ್ಮ ಅಚ್ಚುಮೆಚ್ಚಿನ ಸ್ಮಾರ್ಟ್‌ಫೋನ್ ಅಕಸ್ಮಾತ್ ನೀರಿನಲ್ಲಿ ಬಿದ್ದರೆ ಚಿಂತಿಸಬೇಡಿ. ನಿಮ್ಮ ಸ್ಮಾರ್ಟ್‌ಫೋನ್ ಉಳಿಸಲು ಕೆಳಗಿನ ವಿಧಾನಗಳನ್ನು ಬಳಸಬಹುದು. 
ನಿಮ್ಮ ಫೋನ್ ನೀರಿನಲ್ಲಿ ಬಿದ್ದಾಗ ಪವರ್ ಸ್ವಿಚ್  ಆನ್ ಆಗಿರುತ್ತದೆ. ನೀರಿನಿಂದ ತೆಗೆದ ತಕ್ಷಣವೇ ಸ್ವಿಚ್ ಆಫ್ ಮಾಡಬೇಕು.  ಇದರಿಂದ ಶಾರ್ಟ್ ಸರ್ಕೀಟ್  ಆಗುವುದನ್ನು ತಪ್ಪಿಸಿ ಫೋನ್ ಒಳಭಾಗ ಹಾನಿಯಾಗುವುದಿಲ್ಲ. 
 
ಸ್ವಿಚ್ ಆಫ್ ಮಾಡಿದ ಬಳಿಕ ಬ್ಯಾಟರಿ, ಸಿಮ್ ಕಾರ್ಡ್, ಮೆಮರಿ ಕಾರ್ಡ್ ಎಲ್ಲವನ್ನೂ ಹೊರಗೆ ತೆಗೆಯಬೇಕು. ಇವುಗಳನ್ನು ಒಣಗಿದ ಬಟ್ಟೆಯಲ್ಲಿ ಒರೆಸಬೇಕು. 
ನಂತರ ಫೋನ್‌ ಕುಲುಕಿಸಿ ನೀರಿನ ತೇವಾಂಶವನ್ನು ತೆಗೆಯಬೇಕು.  ಹೊರಭಾಗದಲ್ಲಿ ನೀರಿನ ತೇವಾಂಶ ಇರದಂತೆ ಒರೆಸಬೇಕು. 
 
ಗಾಳಿಯಾಡದ ಪಾತ್ರೆಯಲ್ಲಿ ಹಸಿ ಅಕ್ಕಿಯನ್ನು ತುಂಬಿ ಅಕ್ಕಿಯೊಳಗೆ ಫೋನ್ ಹುದುಗಿಸಬೇಕು. ಸುಮಾರು 24ರಿಂದ 48 ಗಂಟೆಗಳವರೆಗೆ ಫೋನ್ ಹುದುಗಿಸಿಡಬೇಕು. ನೀರಿನಿಂದ ತುಂಬಾ ಹಾನಿಯಾಗಿರದಿದ್ದರೆ ನಿಮ್ಮ ಫೋನ್ ಕಾರ್ಯಾರಂಭ ಮಾಡುತ್ತದೆ. ಆದರೆ ಫೋನ್ ಪುನಃ ಸುಸ್ಥಿತಿಗೆ ಬರುವ ಅವಕಾಶ ಶೇ. 50ರಷ್ಟು ಮಾತ್ರವಿರುತ್ತದೆ. 

ವೆಬ್ದುನಿಯಾವನ್ನು ಓದಿ