ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ಶೇ. 7ಕ್ಕೆ ಕುಸಿತ

ಸೋಮವಾರ, 31 ಆಗಸ್ಟ್ 2015 (20:39 IST)
ಜಿಡಿಪಿ ಬೆಳವಣಿಗೆಯು ಹಿಂದಿನ ತ್ರೈಮಾಸಿಕದಲ್ಲಿ ಶೇ. 7.5ರಿಂದ ಏಪ್ರಿಲ್ ಜೂನ್ ತ್ರೈಮಾಸಿಕದಲ್ಲಿ  ಶೇ. 7ಕ್ಕೆ ಕುಸಿದಿರುವುದು ನೀರಸ ಸಾಧನೆಯನ್ನು ಬಿಂಬಿಸುತ್ತಿದೆ. ಕೃಷಿ, ಸೇವೆಗಳು ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಕುಸಿತದಿಂದ ಈ ಬೆಳವಣಿಗೆ ಉಂಟಾಗಿದೆ.
 
ಆರ್ಥಿಕ ಚಟುವಟಿಕೆ ಅಳೆಯಲು ಸಿಎಸ್‌‍ಒ ಜಾರಿಗೆ ತಂದ ಹೊಸ ಪರಿಕಲ್ಪನೆ ಸಗಟು ಮೌಲ್ಯಾಧಾರಿತ ಕೂಡ ಹಿಂದಿನ ವರ್ಷದ ಶೇ. 7.4ರಿಂದ ಶೇ. 7.1ಕ್ಕೆ ಕುಸಿದಿದೆ. 
ಸರ್ಕಾರವು ವಿತ್ತೀಯ ವರ್ಷದ ಆರಂಭದಲ್ಲಿ 8.1ರಿಂದ 8.5 ಶೇ. ಬೆಳವಣಿಗೆ ದರವನ್ನು ಬಿಂಬಿಸಿತ್ತು. ಆದರೆ ಅದನ್ನು ಸಾಧಿಸುವುದು ಕಷ್ಟವಾಗಿದೆ. ಆರ್‌ಬಿಐ ಮೂರು ಹಂತಗಳಲ್ಲಿ 0.75 ಶೇ. ಬಡ್ಡಿದರಗಳನ್ನು ಕಡಿತ ಮಾಡಿದ್ದು,  ಮುಂದಿನ ದ್ವೈಮಾಸಿಕ ನೀತಿಯನ್ನು ಸೆ. 29ರಂದು ಪ್ರಕಟಿಸಲಿದೆ.
 
ವಿದ್ಯುತ್, ಅನಿಲ, ನೀರಿನ ಪೂರೈಕೆ ಮತ್ತು ಇತರೆ ಸೇವೆಗಳ ಉತ್ಪಾದನೆಯಲ್ಲಿ  ಶೇ. 3.2ರಷ್ಟು ಕುಸಿತ ಉಂಟಾಗಿದೆ. ಕಳೆದ ವರ್ಷ ಇದು ಶೇ. 10.1ರಷ್ಟು ಕುಸಿತ ಕಂಡಿತ್ತು. 
ಹಣಕಾಸು, ಸ್ಥಿರಾಸ್ತಿ ಮತ್ತು ವೃತ್ತಿಪರ ಸೇವೆಗಳು ಶೇ. 8.9ರಷ್ಟು ಕುಗ್ಗಿದೆ. ಹಿಂದಿನ ವರ್ಷ ಶೇ. 9.3ರಷ್ಟು ಕುಗ್ಗಿತ್ತು. ಆದಾಗ್ಯೂ ನಿರ್ಮಾಣ ಚಟುವಟಿಕೆ ಶೇ. 6.9ರಷ್ಟು ಏರಿಕೆಯಾಗಿದ್ದು ಹಿಂದಿನ ವರ್ಷ ಶೇ. 6.5ರಷ್ಟಿತ್ತು. 

ವೆಬ್ದುನಿಯಾವನ್ನು ಓದಿ