2015-16ರಲ್ಲಿ ಜಿಡಿಪಿ ದರ ಶೇ. 8.1ರಿಂದ 8.5ಕ್ಕೆ ಏರಿಕೆ ನಿರೀಕ್ಷೆ

ಶುಕ್ರವಾರ, 27 ಫೆಬ್ರವರಿ 2015 (12:32 IST)
ಕೇಂದ್ರ ಬಜೆಟ್ ಶನಿವಾರ ಮಂಡನೆಯಾಗಲಿದ್ದು, ಅದಕ್ಕೆ ಒಂದು ದಿನ ಮುಂಚಿತವಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. 2015-16ರಲ್ಲಿ ಜಿಡಿಪಿ ದರವು ಶೇ. 8.1ರಿಂದ ಶೇ. 8.5ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. 

ತ್ತೀಯ ಕೊರತೆ ಶೇ. 4.1ಕ್ಕೆ ಇಳಿಕೆಯಾಗುವ ಸಂಭವವಿದೆ. ಗ್ರಾಹಕ ಹಣದುಬ್ಬರ ಶೇ. 5ರಿಂದ 5.5ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. ಆಹಾರ ಧಾನ್ಯ ಉತ್ಪಾದನೆಯಲ್ಲಿ ಪ್ರಗತಿಯಾಗಿದೆ. ಹಣದುಬ್ಬರದ ಪ್ರಮಾಣ ಇಳಿಮುಖವಾಗಿದೆ  ಎಂದು ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.ಭಾರತ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಿ ಸಾಲದ ಗುರಿಗಳನ್ನು ಕೂಡ ಮುಟ್ಟಬಹುದು ಆರ್ಥಿಕ ಸಮೀಕ್ಷೆ ತಿಳಿಸಿದೆ.

ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ. 3ಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ವರದಿಯಲ್ಲಿ ತಿಳಿಸಿದೆ.2014-15ರಲ್ಲಿ ಆಹಾರಧಾನ್ಯ ಉತ್ಪಾದನೆ 257.07 ದಶಲಕ್ಷ ಟನ್‌ಗಳು. ಕಳೆದ 5 ವರ್ಷಗಳಲ್ಲಿ ಸರಾಸರಿ ಉತ್ಪಾದನೆಗಿಂತ ಶೇ. 8.5 ದಶಲಕ್ಷ ಟನ್ ಹೆಚ್ಚಾಗಲಿದೆ.

ವೆಬ್ದುನಿಯಾವನ್ನು ಓದಿ