ಪಿಎಫ್‌‌ ಖಾತೆದಾರರಿಗೆ ಸಿಗಲಿದೆ ಯೂನಿವರ್ಸಲ್‌ ನಂಬರ್

ಮಂಗಳವಾರ, 22 ಜುಲೈ 2014 (17:54 IST)
ಪಿಎಫ್‌ ಖಾತೆ ಹೊಂದಿರುವವರಿಗೆ ಶುಭ ಸುದ್ದಿ. ಕಾರ್ಮಿಕ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಓ) ತನ್ನ ಐದು ಕೋಟಿಗಿಂತ ಹೆಚ್ಚಿನ ಖಾತೆದಾರರಿಗಾಗಿ ಪೊರ್ಟೆಬಲ್‌‌ ಯೂನಿವರ್ಸಲ್ ಅಕೌಂಟ್‌ ನಂಬರ್‌ (UAN) ಜಾರಿಗೊಳಿಸಲಿದೆ. ಖಾತೆದಾರರು ತಮ್ಮ ಪೂರ್ತಿ ವೃತ್ತಿ ಜೀವನದಲ್ಲಿ ಎಲ್ಲಿ ಬೇಕಾದರು ದೇಶಾದ್ಯಂತ ಎಲ್ಲಿಯೂ ಬಳಸಬಹುದು ಎಂದು ಸೋಮವಾರ ಲೋಕಸಭೆಯಲ್ಲಿ ಕಾರ್ಮಿಕ ಸಚಿವ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.  
 
ಯುಎಎನ್‌ನಿಂದ ಎಲ್ಲಾ ಇಪಿಎಫ್‌‌ ಸದಸ್ಯರನ್ನು ಜೋಡಿಸಲಾಗುತ್ತದೆ. ಇದರಿಂದ ಸಂಘಟಿತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ತಮ್ಮ ಉದ್ಯೋಗ ಬದಲಿಸುವಾಗ ಪಿಎಫ್‌ ಟ್ರಾನ್ಸಫರ್‌ ಮಾಡುವ ಅವಶ್ಯಕತೆ ಇರುವುದಿಲ್ಲ.  
 
ಇಪಿಎಫ್‌‌ಓನಲ್ಲಿರುವ ಸದಸ್ಯರಿಗೆ ಅಕ್ಟೋಬರ್‌‌ 15ರವರೆಗೆ ಈ ನಂಬರ್‌ ನೀಡಲಾಗುವುದು. ಯುಎಎನ್‌‌ ಸದಸ್ಯರ ಎಲ್ಲಾ ಉದ್ಯೋಗಗಳಿಗೆ ಒಂದೇ ಬಾರಿಗೆ ಜೋಡಿಸಲಾಗುವುದು ಮತ್ತು ಈ ತರಹದ ಪೊರ್ಟೆಬಿಲಿಟಿ ಸೌಲಭ್ಯ ಸಿಗುವುದು. 
 
ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲೀ ತಮ್ಮ ಬಜೆಟ್‌ ಭಾಷಣದಲ್ಲಿ ಪಿಎಫ್‌ ಖಾತೆದಾರರಿಗೆ ಯುನಿವರ್ಸಲ್‌ ಅಕೌಂಟ್‌ ನಂಬರ್‌‌ನ ಸೌಲಭ್ಯ ನೀಡುವುದಾಗಿ ತಿಳಿಸಿದ್ದರು. ಕಾರ್ಮಿಕ ಸಚಿವಾಲಯ ಈ ನಂಬರ್‌‌ ಆಧಾರ/ಎನ್‌‌ಪಿಆರ್‌ ಮತ್ತು ಪ್ಯಾನ್‌ ನಂಬರ್‌ ಜೊತೆಗೆ ಜೋಡಿಸುವ ವಿಚಾರ ನಡೆಸುತ್ತಿದೆ. ಇದರಿಂದ ಮತ್ತಷ್ಟು ಸುರಕ್ಷಿತವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ..

ವೆಬ್ದುನಿಯಾವನ್ನು ಓದಿ