ಚಿತ್ರಗಳ ನೋಟ, ಬೆಳಕು ಸುಧಾರಣೆಗೆ ಫೇಸ್‌ಬುಕ್ ಕಾರ್ಯಪ್ರವೃತ್ತ

ಶುಕ್ರವಾರ, 19 ಡಿಸೆಂಬರ್ 2014 (15:49 IST)
ಬಳಕೆದಾರರು ಅಪ್‌ಲೋಡ್ ಮಾಡಿದ ಎಲ್ಲ ಚಿತ್ರಗಳ ವ್ಯತ್ಯಾಸ ಮತ್ತು ಬೆಳಕನ್ನು ಸುಧಾರಿಸಲು ಫೇಸ್‌ಬುಕ್ ಕಾರ್ಯಪ್ರವೃತ್ತವಾಗಿದೆ. ಆಪಲ್  ಐಒಎಸ್ ಉಪಕರಣಗಳಲ್ಲಿ ಆರಂಭವಾಗಿರುವ ಅಪ್‌ಡೇಟ್ ಆಂಡ್ರಾಯ್ಡ್ ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಶೀಘ್ರದಲ್ಲೇ ಸೇರಿಸಲಾಗುತ್ತದೆ.
 
ಇದಕ್ಕೆ ಮುಂಚೆ ಈ ಫೀಚರ್ ಐಚ್ಛಿಕವಾಗಿತ್ತು. ಆದರೆ ಈಗ ವಿಸ್ತರಣೆಗಳನ್ನು ತಾನೇತಾನಾಗಿ ಮಾಡಲಾಗುತ್ತದೆ ಎಂದು  ಫೇಸ್‌ಬುಕ್ ವರದಿ ಮಾಡಿದೆ.  ಫೋಟೋಗಳನ್ನು ಕ್ರಾಪ್ ಮಾಡುವ ಮತ್ತು ಫಿಲ್ಟರ್ ಮಾಡುವ ಆಪ್ಷನ್‌ಗಳು ಮುಂಚಿನಂತೆ ಲಭ್ಯವಿದೆ. ಆದರೆ ಅಪ್‌ಲೋಡ್ ಆದ ಎಲ್ಲ ಚಿತ್ರಗಳು ಚೆನ್ನಾಗಿ ಕಾಣುವಂತೆ ಮಾಡಲು ವೆಬ್‌ಸೈಟ್ ಪ್ರಯತ್ನಿಸುತ್ತಿದೆ.

ಎಡಿಟ್ ಆಪ್ಷನ್ ಪ್ರಯತ್ನಿಸಲು ಅಪ್‌ಲೋಡ್ ಮಾಡಲು ಫೋಟೋ ಆಯ್ಕೆ ಮಾಡಿ. ಚಿತ್ರವನ್ನು ಅಪ್ಲಿಕೇಷನ್ ವಿಸ್ತರಿಸಿದ ಬಳಿಕ, ನೀಲಿ ಬಣ್ಣದಲ್ಲಿ ಸಣ್ಣ ಮ್ಯಾಜಿಕ್ ವಾಂಡ್ ಬೆಳಗುತ್ತದೆ. ಇಮೇಜ್‌ಗಳನ್ನು ಅಪ್‌ಲೋಡ್ ಮಾಡುವುದಕ್ಕೆ ಮುಂಚೆ  ಎಫೆಕ್ಟ್‌ಗಳನ್ನು ಹೆಚ್ಚಿಸುವ ಅಥವ ಕಡಿಮೆ ಮಾಡುವ ಆಯ್ಕೆ ಕೂಡ ಇದೆ. 

ವೆಬ್ದುನಿಯಾವನ್ನು ಓದಿ