ನೆಟ್ ತಾಟಸ್ಥ್ಯಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ ಫೇಸ್‌ಬುಕ್ ಸಿಇಒ

ಶುಕ್ರವಾರ, 17 ಏಪ್ರಿಲ್ 2015 (19:55 IST)
ಸಾರ್ವತ್ರಿಕ ಸಂಪರ್ಕ ಮತ್ತು ನೆಟ್ ತಾಟಸ್ಥ್ಯ ಒಟ್ಟೊಟ್ಟಿಗೆ ಇರಬೇಕು ಎಂದು ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜಕರ್‌ಬರ್ಗ್ ಹೇಳಿದ್ದಾರೆ. ಫೇಸ್‌ಬುಕ್ ನೇತೃತ್ವದಲ್ಲಿ ಇಂಟರ್ ನೆಟ್ .ಆರ್ಗ್ ಉಚಿತ ಮೂಲಭೂತ ಅಂತರ್ಜಾಲ ಸೇವೆಗಳನ್ನು ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ನೀಡುವ ಜೀರೋ ರೇಟಿಂಗ್ ಪರಿಕಲ್ಪನೆಯನ್ನು ಟೀಕಿಸುವವರಿಗೆ ಅವರು ಉತ್ತರಿಸುತ್ತಾ ಹೇಳಿದರು.  
 
ಇಂತಹ ಯೋಜನೆಗಳಿಂದ ನೆಟ್ ತಾಟಸ್ಥ್ಯ ತತ್ವದ ಉಲ್ಲಂಘನೆಯಾಗುತ್ತದೆ ಎಂಬ ವಾದವಿವಾದಗಳ ನಡುವೆ ಜಗರ್‌ಬರ್ಗ್ ಪ್ರತಿಕ್ರಿಯೆ ಹೊರಬಿದ್ದಿದೆ. ಈ ಉಪಕ್ರಮವನ್ನು ಸಮರ್ಥಿಸಿಕೊಂಡ ಜಕರ್‌ಬರ್ಗ್ ಕೆಲವು ಜನರು ಜೀರೋ ರೇಟಿಂಗ್ ಪರಿಕಲ್ಪನೆಯನ್ನು ಟೀಕಿಸಿದ್ದಾರೆ. ಕೆಲವು ಸೇವೆಗಳನ್ನು ಉಚಿತವಾಗಿ ನೀಡುವುದರಿಂದ ನೆಟ್ ತಾಟಸ್ಥ್ಯ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಹೇಳುತ್ತಾರೆ.ಆದರೆ ಅದಕ್ಕೆ ನನ್ನ ತೀವ್ರ ಅಸಮ್ಮತಿ ಇದೆ ಎಂದು ಹೇಳಿದರು. 
 
 ನಾವು ನೆಟ್ ತಾಟಸ್ಥ್ಯಕ್ಕೆ ಸಂಪೂರ್ಣ ಬೆಂಬಲಿಸುತ್ತೇವೆ. ಅಂತರ್ಜಾಲವನ್ನು ಮುಕ್ತವಾಗಿಡಲು ನಾವು ಬಯಸುತ್ತೇವೆ. ನಾವು ಅದಕ್ಕೆ ಸಂಪೂರ್ಣ ಬದ್ಧರಾಗಿದ್ದೇವೆ ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ