ಹದಿಹರೆಯದವರಲ್ದಿ ದಿನದಿನಕ್ಕೂ ಕುಸಿಯುತ್ತಿದೆ ಫೇಸ್‌ಬುಕ್ ಜನಪ್ರಿಯತೆ

ಸೋಮವಾರ, 22 ಡಿಸೆಂಬರ್ 2014 (17:00 IST)
ಫೇಸ್‌ಬುಕ್ ಜನಪ್ರಿಯತೆ ದಿನದಿನಕ್ಕೂ ಕುಸಿಯುತ್ತಿದ್ದು, ಕಳೆದವರ್ಷಕ್ಕಿಂತ ಈ ವರ್ಷ ಹದಿಹರೆಯದವರಲ್ಲಿ ಫೇಸ್‌ಬುಕ್ ಮೇಲಿದ್ದ ಅಭಿಮಾನ ಕಡಿಮೆಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಕಳೆದ ವರ್ಷ ಶೇ. 94 ಹದಿಹರೆಯದವರು ಫೇಸ್‌ಬುಕ್ ಬಳಕೆ ಮಾಡಿದ್ದರೆ ಈ ವರ್ಷ ಶೇ. 88 ಹದಿಹರೆಯದವರು ಬಳಸಿದ್ದಾರೆ.

ಇನ್ನುಳಿದ ಎಲ್ಲಾ ವಯೋಮಾನದವರಲ್ಲೂ ಕೂಡ ವೆಬ್‌ಸೈಟ್ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಸಿಎನ್‌ಇಟಿ ವರದಿ ಮಾಡಿದೆ. ಮಾರುಕಟ್ಟೆ ಸಂಶೋಧನೆ ಸಂಸ್ಥೆ ಫ್ರಾಂಕ್ ಎನ್ ಮ್ಯಾಜಿಡ್ ಅಸೋಸಿಯೇಟ್ಸ್ ನಡೆಸಿದ ಸಮೀಕ್ಷೆಯಲ್ಲಿ  ಫೇಸ್‌ಬುಕ್ ಬಳಸುವ 13ರಿಂದ 17ರ ವಯೋಮಾನದ ಯುವಕರ ಶೇಕಡಾವಾರು 2012ರಲ್ಲಿ 95, 2013ರಲ್ಲಿ 94ರಿಂದ ಈ ವರ್ಷ ಶೇ.88ಕ್ಕೆ ಕುಸಿದಿದೆ.

ಅಧ್ಯಯನದಲ್ಲಿ ಪರೀಕ್ಷಿಸಲಾದ ಎಲ್ಲ ವಯೋಮಾನದ ಜನರಲ್ಲಿ ಒಟ್ಟು ಶೇ. 90 ರಷ್ಟು ಫೇಸ್‌ಬುಕ್ ಬಳಸುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಶೇ. 93ರಷ್ಟಿತ್ತು. ಹದಿಹರೆಯದವರು ಇತರೆ ಸಾಮಾಜಿಕ ಜಾಲ ತಾಣಗಳಾದ ಇನ್‌ಸ್ಟಾಗ್ರಾಂ ಮುಂತಾದ ಫೇಸ್‌ಬುಕ್ ಮಾಲೀಕತ್ವದ ಸೈಟ್‌ಗಳನ್ನು ವೀಕ್ಷಿಸುತ್ತಿದ್ದಾರೆ ಎಂದು ಇತರೆ ಸಮೀಕ್ಷೆಗಳು ಹೇಳಿವೆ.

ಜನರು ಬಳಸುತ್ತಿರುವ ಇತರೆ ಜಾಲಗಳು ಸ್ನಾಪ್‌ಚಾಟ್(ಶೇ. 18ರಷ್ಟು), ಆಪಲ್ ಐಮೆಸೇಜ್(ಶೇ. 17ರಷ್ಟು) ಮತ್ತು ವಾಟ್ಸ್‌ಆಪ್ ಮತ್ತು ಗೂಗಲ್ ಹ್ಯಾಂಗ್‌ಔಟ್ ಶೇ. 9ರಷ್ಟು ಜನರು ಬಳಸುತ್ತಿದ್ದಾರೆ. ಸಮೀಕ್ಷೆಯಲ್ಲಿ 1934 ಜನರನ್ನು ತಲುಪಲಾಗಿದ್ದು, ಸ್ಮಾರ್ಟ್ ಫೋನ್ ಬಳಕೆದಾರರನ್ನು ಮಾತ್ರ ಸಮೀಕ್ಷೆ ನಡೆಸಲಾಯಿತು. 

ವೆಬ್ದುನಿಯಾವನ್ನು ಓದಿ